Menu

ನಟಿ ಶಫಾಲಿ ಸಾವಿಗೆ ಲೋ ಬಿಪಿ ಕಾರಣ: ಮರಣೋತ್ತರ ವರದಿ

shefali jariwala

ಕಾಂಟಾ ಲಾಗಾ ಹಾಡಿನ ಮೂಲಕ ಜನಪ್ರಿಯರಾಗಿದ್ದ ನಟಿ ಶೆಫಾಲಿ ಜರಿವಾಲಾ ಸಾವಿಗೆ ಲೋ ಬಿಪಿಯಿಂದ ಉಂಟಾದ ಹೃದಯಾಘಾತವೇ ಕಾರಣ ಎಂದು ವೈದ್ಯರು ಶಂಕಿಸಿದ್ದಾರೆ.

ಭಾನುವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದ ಕಾರಣ ನಟಿ ಶೆಫಾಲಿ ಉಪವಾಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನಟಿಯ ಪತಿ ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅವರ ಮನೆ ಪರಿಶೀಲಿಸುವಾಗ ವಯಸ್ಸಾಗದಂತೆ ತಡೆಯಲು ಬಳಕೆ ಮಾಡುವ ಮಾತ್ರೆ, ಚರ್ಮಕ್ಕೆ ಹೊಳಪು ಕೊಡೋ ಮಾತ್ರೆಗಳು, ವಿಟಮಿನ್ ಮಾತ್ರೆಗಳನ್ನು ಸಿಕ್ಕಿವೆ. ಶೆಫಾಲಿ ಅವರು ವೈದ್ಯರ ಸಂಪರ್ಕಿಸದೆ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣಕ್ಕೆ ಅವರಿಗೆ ಈವರೆಗೆ ಯಾವುದೇ ತೊಂದರೆ ಆಗಿರಲಿಲ್ಲವಂತೆ.

ಶೆಫಾಲಿ ಅವರು ‘ಕಾಂಟ ಲಗ’ ಹಾಡಿನ ಮೂಲಕ ಸಖತ್ ಫೇಮಸ್ ಆದರು. ಅವರು ಕನ್ನಡದಲ್ಲೂ ಗುರುತಿಸಿಕೊಂಡಿದ್ದಾರೆ. ‘ಹುಡುಗರು’ ಸಿನಿಮಾದ ‘ಪಂಕಜಾ..’ ಹಾಡಿಗೆ ಅವರು ಭರ್ಜರಿ ಸ್ಟೆಪ್ ಹಾಕಿದ್ದರು.

Related Posts

Leave a Reply

Your email address will not be published. Required fields are marked *