ಬೆಂಗಳೂರು ಸಿಟಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 23 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಸಿಟಿ ಪೊಲೀಸರು ಮತ್ತು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿ ಒಟ್ಟು ಆರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಕೇರಳದವರು.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೆಜಿ ಎಂಡಿಎಂಎಂಎ, ಎರಡು ಕೆಜಿ ಅಫೀಮ್ ಸೇರಿ ನಾಲ್ಕು ಕೋಟಿ ಮೌಲ್ಯದ ಮಾದಕ ವಸ್ತು, ಕೆಜಿ ನಗರ ಠಾಣಾ ವ್ಯಾಪ್ತಿಯಲ್ಲಿ ಏಳು ಕೆಜಿ ಹೈಡ್ರೋ ಗಾಂಜಾ ಪತ್ತೆಯಾಗಿದ್ದು, 7.8 ಕೋಟಿ ಮೌಲ್ಯದ್ದಾಗಿದೆ. ಕೊತ್ತನೂರು 4.8 ಕೆಜಿ ಎಂಡಿಎಂಎ ಕ್ರಿಸ್ಟಲ್ ಒಟ್ಟು 12 ಕೋಟಿ ಮೌಲ್ಯ ಹೊಂದಿದ್ದು ಇವೆಲ್ಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಮರಾಜಪೇಟೆಯ ಕೊರಿಯರ್ ಕಚೇರಿಯಲ್ಲಿ ಥೈಲ್ಯಾಂಡ್ ನಿಂದ ಕೆಜಿಗಟ್ಟಲೆ ಹೈಡ್ರೋ ಗಾಂಜಾ ಬಂದಿತ್ತು. ಥಾಯ್ಲೆಂಡ್ ಸೇರಿ ವಿದೇಶದಂದ ಕೊರಿಯರ್ ಬಾಕ್ಸ್ ಗಳಲ್ಲಿ ಗಾಂಜಾ ಪೂರೈಕೆಯಾಗುತಿತ್ತು. ನಾಯಿ ಮತ್ತು ಬೆಕ್ಕಿಗೆ ಕೊಡುವ ಫುಡ್ ಬಾಕ್ಸ್ ಒಳಗೆ ಅವನು ಇರಿಸಲಾಗುತ್ತಿತ್ತು.
ಕೊತ್ತನೂರು ಭಾಗದಲ್ಲಿ ಇಬ್ಬರು ನೈಜೀರಿಯನ್ಸ್ ಲೇಡಿ ಪೆಡ್ಲರ್ಸ್ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದರು, ಪ್ಲ್ಯಾಟ್‌ನಲ್ಲಿ ಉಳಿದುಕೊಂಡು ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿ ವ್ಯವಹಾರ ನಡೆಸುತ್ತಿದ್ದರು.