ರೈಲು ಪ್ರಯಾಣಿಕರು ರೈಲು ಟಿಕೆಟ್ ಬುಕ್ ಮಾಡಿದ್ದರೆ ಇನ್ಮುಂದೆ ದಿನಾಂಕ ಬದಲಾವಣೆ ಮಾಡಲು ಸಾಧ್ಯವಾಗಲಿದೆ. ಬುಕ್ ಆದ ಟಿಕೆಟ್‌ನ ದಿನಾಂಕ ಬದಲಾವಣೆಗೆ ಜನವರಿಯಿಂದ ಅವಕಾಶ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಒಮ್ಮೆ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣದ ದಿನಾಂಕ ಬದಲಾವಣೆಗೆ ಅವಕಾಶ ಇರಲಿಲ್ಲ. ಈಗ ಬುಕ್ ಆದ ಟಿಕೆಟ್ ದಿನಾಂಕ ಬದಲಿಸಲು ಅವಕಾಶವಿರಲಿದೆ. ಈ ಹಿಂದೆ ಟಿಕೆಟ್ ಬುಕ್ ಆಗಿದ್ದರೆ ದಿನಾಂಕ ಬದಲಾವಣೆಗೆ ಮೊದಲಿನ ಬುಕಿಂಗ್ ರದ್ದು ಮಾಡಿ ಹೊಸ ಟಿಕೆಟ್ ಬುಕ್ ಮಾಡಬೇಕಿತ್ತು.
ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ, ಟಿಕೆಟ್ ದಿನಾಂಕ ಬದಲಾವಣೆಗೆ ಯಾವುದೇ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಟಿಕೆಟ್ ರದ್ದು ವೇಳೆ ಆಗುವ ಹಣ ಕಡಿತದಂತೆ ಇಲ್ಲಿ ಆಗುವುದಿಲ್ಲ. ಈ ಮೂಲಕ ಇಲಾಖೆಯು ರೈಲು ಟಿಕೆಟ್ ಬುಕಿಂಗ್ ವೇಳೆ ಇದ್ದ ನಿಯಮ ಸಡಿಲಿಕೆಗೆ ಕ್ರಮ ಕೈಗೊಂಡಿದೆ.