Wednesday, October 08, 2025
Menu

ಬಿಡದಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳ ಠಿಕಾಣಿ

jollywood

ಬಿಗ್‌ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋ ಮಾಲಿನ್ಯ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ವಾಯು ನಿಯಂತ್ರಣ ಮಂಡಳಿ ಅಧಿಕಾರಿಗಳು ಬೀಗ ಜಡಿದ ಕಾರಣ ಸ್ಪರ್ಧಿಗಳನ್ನು ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಲಾಗಿದೆ. ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮನೆಯ ನಿಯಮಗಳೇ ಇಲ್ಲೂ ಅನ್ವಯವಾಗುತ್ತಿದೆ.

ಜಾಲಿವುಡ್‌ ಸ್ಟುಡಿಯೋ ಮಾಲಿನ್ಯ ನಿಯಮ ಪಾಲನೆ ಮಾಡದ್ದಕ್ಕೆ ಈ ರೆಸಾರ್ಟ್‌ಗ ನಿಮ್ಮನ್ನು ಕರೆತರಲಾಗಿದೆ ಎಂದು ಆಯೋಜಕರು ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಮತ್ತೆ ಶೋ ನಡೆಯುವವರೆಗೂ ನೀವು ನಮ್ಮ ಸುಪರ್ದಿಯಲ್ಲೇ ಇರಬೇಕಾಗುತ್ತದೆ ಎಂದು ತಿಳಿಸಿದ್ದು ಸ್ಪರ್ಧಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಬೆಳಗ್ಗೆ ರೆಸಾರ್ಟ್ ಒಳಗಡೆ ಸ್ಪರ್ಧಿಗಳು ವಾಕಿಂಗ್, ಜಾಗಿಂಗ್, ಬ್ರೇಕ್ ಫಾಸ್ಟ್ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಂತೆ ರೆಸಾರ್ಟ್‌ನಲ್ಲೂ ಕುಟುಂಬಸ್ಥರು, ಸ್ನೇಹಿತರ ಸಂಪರ್ಕಕ್ಕೆ ಸ್ಪರ್ಧಿಗಳು ಬರುವಂತಿಲ್ಲ. ಆಯೋಜಕರ ತಂಡದವರಿಗೆ ಮಾತ್ರ ಸ್ಪರ್ಧಿಗಳ ಭೇಟಿಗೆ ಅವಕಾಶ ಇರುತ್ತದೆ.

ಸ್ಪರ್ಧಿಗಳಿಗೆ ಮೊಬೈಲ್, ಇಂಟರ್ನೆಟ್, ಟಿವಿ ಯಾವ ಸೌಲಭ್ಯಗಳನ್ನು ಒದಗಿಸಿಲ್ಲ ಎನ್ನುವ ಮಾಹಿತಿಯಿದೆ. ರೆಸಾರ್ಟ್‌ನ ಭದ್ರತಾ ಸಿಬ್ಬಂದಿ ನಿಗಾದಲ್ಲಿ ಸ್ಪರ್ಧಿಗಳು ಇದ್ದಾರೆ. ಬಿಗ್‌ ಬಾಸ್‌ ಶೋ ನಡೆಸಲು ಕೋರ್ಟ್‌ ಅನುಮತಿ ನೀಖಡುವುದು ತಡವಾದರೆ ಸ್ಪರ್ಧಿಗಳನ್ನು ಖಾಸಗಿ ಹೋಟೆಲಿಗೆ ಶಿಫ್ಟ್‌ ಮಾಡಲು ವಾಹಿನಿ ಸಿದ್ಧತೆ ನಡೆಸಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಬೆಂಗಳೂರು ಹೊರವಲಯದ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೊಗೆ ಮಂಗಳವಾರ  ಬೀಗ ಜಡಿಯಲಾಗಿದ್ದು, ಬಿಗ್ ಬಾಸ್ ಶೋ ಎರಡನೇ ವಾರಕ್ಕೆ ಬಾಗಿಲು ಮುಚ್ಚಿದೆ. ಪರವಾನಗಿ ಪಡೆದಿಲ್ಲ. ಅನುಮತಿಗಾಗಿ ಸರ್ಕಾರಕ್ಕೆ ಪತ್ರವೂ ಬರೆದಿಲ್ಲ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿಲ್ಲ ಎಂಬುದೂ ಸೇರಿದಂತೆ ಸಂಪೂರ್ಣ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ವಾಯು ನಿಯಂತ್ರಣ ಮಂಡಳಿ ಅಧಿಕಾರಿಗಳು ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದರು.

ಜಾಲಿವುಡ್ ಸ್ಟುಡಿಯೋದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋನ 12ನೇ ಆವೃತ್ತಿ ಮುಚ್ಚಿದಂತೆ ಆಗಿದೆ. ಬಿಗ್ ಬಾಸ್ ಶೋನಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲು ರಾತ್ರಿ 7.30ರವರೆಗೆ ಕಾಲವಾಶ ನೀಡಲಾಗಿತ್ತು.

ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದರೂ ಉತ್ತರಿಸದ ಬಿಗ್ ಬಾಸ್ ಕಾರ್ಯಕ್ರಮ ನಿರೂಪಕ ಸಂಸ್ಥೆ ಹಾಗೂ ಜಾಲಿವುಡ್ ಸ್ಟುಡಿಯೋ ಮಾಲೀಕರು ಪ್ರತಿಕ್ರಿಯಿಸದ ಕಾರಣ ಬೀಗ ಹಾಕುತ್ತಿದ್ದೇವೆ. ಜನರನ್ನು ಹೊರಗೆ ಕಳುಹಿಸಿದ ನಂತರ ಸ್ಟುಡಿಯೊಗೆ ಬೀಗ ಹಾಕಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *