ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಸಿಗುವ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ ಅಕ್ಟೋಬರ್ 9 ರಿಂದ ಆರಂಭಗೊಳ್ಳುತ್ತಿದೆ. ಅದ್ಧೂರಿಯಾಗಿ ಜಾತ್ರೆ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಅ.9 ರಂದು ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ.
ಮೊದಲ ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಾಗಿಲು ತೆರೆದ ನಂತರ ಗರ್ಭಗುಡಿ ಸ್ವಚ್ಛ ಮಾಡಲಾಗುವುದು. ಮರುದಿನ ಬೆಳಿಗ್ಗೆ 5 ಗಂಟೆಯಿಂದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ 300 ರೂ. ಹಾಗೂ 1000 ರೂ. ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್ಗಳನ್ನು ರದ್ದು ಮಾಡಿದ್ದು, ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ. ಒಂದು ಪಾಸ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದ್ದು, ದಿನದಲ್ಲಿ ಎರಡು ಗಂಟೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಇರುತ್ತದೆ. 1000 ರೂ ಹಾಗೂ 300 ರೂ ಬೆಲೆಯ ಪಾಸ್‌ಗಳ ವಿತರಣೆ ಇರಲಿದೆ.
ಜಾತ್ರೆಯ ವೇಳಾಪಟ್ಟಿ
ಅಕ್ಟೋಬರ್ ೯ ( ಸಾರ್ವಜನಿಕ ದರ್ಶನವಿಲ್ಲ)
ತಾಯಿ ಹಾಸನಾಂಬ ಜಾನಪದ ಜಾತ್ರೆ ಉದ್ಘಾಟನೆ ಮಾನ್ಯ
ಉಸ್ತುವಾರಿ ಸಚಿವರು ಮತ್ತು ಗಣ್ಯರಿಂದ
ಸಮಯ: ಸಂಜೆ 6 ಗಂಟೆ
ಸ್ಥಳ: ಹೇಮಾವತಿ ವೇದಿಕೆ, ಹೇಮಾವತಿ ಪುತ್ಥಳಿ ಬಳಿ,
ಹಾಸನಾಂಬ ವಸ್ತು ಪ್ರದರ್ಶನ: ಸ್ಥಳ ಸರ್ಕಾರಿ ವಿಜ್ಞಾನ
ಕಾಲೇಜು ಆವರಣ, ಸಾಲಗಾಮೆ ರಸ್ತೆ
ಸಮಯ: ಬೆಳಗ್ಗೆ 09:00 ರಿಂದ ರಾತ್ರಿ 8:30
————–
ಅಕ್ಟೋಬರ್ ೧೦ (ಸಂಜೆ ಏಳರ ನಂತೆ ಸಾರ್ವಜನಿಕ ದರ್ಶನವಿಲ್ಲ)
ಹಾಸನಾಂಬ ಜಾನಪದ ಜಾತ್ರೆ ಹೊಯ್ಸಳ ವೇದಿಕೆ: ಸ್ಥಳ
ಸುಭಾಶ್ ಚೌಕ, ದೇವಿಗೆರೆ ಸರ್ಕಲ್
ಸಮಯ: ಸಂಜೆ 06:30 ರಿಂದ ರಾತ್ರಿ 9:30
ಹಾಸನಾಂಬ ಜಾನಪದ ಜಾತ್ರೆ ಹಾಸನಾಂಬ ವೇದಿಕೆ: ಸ್ಥಳ
ಹಾಸನಾಂಬ ದೇವಸ್ಥಾನ ಆವರಣ ಸರತಿ ಸಾಲು
ಸಮಯ: ಬೆಳಗ್ಗೆ 05:30 ರಿಂದ 7:30
ಬೆಳಗ್ಗೆ 10:00 ರಿಂದ ಮಧ್ಯಾಹ್ನ 1::00
ರಾತ್ರಿ 8:00 ರಿಂದ ರಾತ್ರಿ 11:00
ಹಾಸನಾಂಬ ವಸ್ತು ಪ್ರದರ್ಶನ: ಸ್ಥಳ ಸರ್ಕಾರಿ ವಿಜ್ಞಾನ
ಕಾಲೇಜು ಆವರಣ, ಸಾಲಗಾಮೆ ರಸ್ತೆ
ಸಮಯ: ಬೆಳಗ್ಗೆ 09:00 ರಿಂದ ರಾತ್ರಿ 8:30
ಹಾಸನಾಂಬ ಟೂರ್ ಪ್ಯಾಕೇಜ್
ಸಮಯ: ಬೆಳಗ್ಗೆ 06:00 ರಿಂದ ರಾತ್ರಿ 8:00
———————-
ಅಕ್ಟೋಬರ್ ೧೧ ( ಮಧ್ಯಾಹ್ನ ೨ ರಿಂದ ೩:೩೦ ರವರೆಗೆ, ಬೆಳಗ್ಗೆ ೩ ರಿಂದ ೫ ರವರೆಗೆ ಸಾರ್ವಜನಿಕ ದರ್ಶನವಿಲ್ಲ)
ಹಾಸನಾಂಬ ಜಾನಪದ ಜಾತ್ರೆ ಹೊಯ್ಸಳ ವೇದಿಕೆ: ಸ್ಥಳ
ಸುಭಾಶ್ ಚೌಕ, ದೇವಿಗೆರೆ ಸರ್ಕಲ್
ಸಮಯ: ಸಂಜೆ ೦೬:೩೦ ರಿಂದ ರಾತ್ರಿ ೯:೩೦
ಹಾಸನಾಂಬ ಜಾನಪದ ಜಾತ್ರೆ ಹಾಸನಾಂಬ ವೇದಿಕೆ: ಸ್ಥಳ
ಹಾಸನಾಂಬ ದೇವಸ್ಥಾನ ಆವರಣ ಸರತಿ ಸಾಲು
ಸಮಯ: ಬೆಳಗ್ಗೆ ೦೫:೩೦ ರಿಂದ ಬೆಳಗ್ಗೆ ೭:೩೦
ಬೆಳಗ್ಗೆ ೧೦:೦೦ ರಿಂದ ಮಧ್ಯಾಹ್ನ ೧::೦೦
ರಾತ್ರಿ ೮:೦೦ ರಿಂದ ರಾತ್ರಿ ೧೧:೦೦
ಹಾಸನಾಂಬ ವಸ್ತು ಪ್ರದರ್ಶನ: ಸ್ಥಳ ಸರ್ಕಾರಿ ವಿಜ್ಞಾನ
ಕಾಲೇಜು ಆವರಣ, ಸಾಲಗಾಮೆ ರಸ್ತೆ
ಸಮಯ: ಬೆಳಗ್ಗೆ ೦೯:೦೦ ರಿಂದ ರಾತ್ರಿ ೮:೩೦
ಹಾಸನಾಂಬ ಟೂರ್ ಪ್ಯಾಕೇಜ್
ಸಮಯ: ಬೆಳಗ್ಗೆ ೦೬:೦೦ ರಿಂದ ರಾತ್ರಿ ೮:೦೦
ಆಗಸದಿಂದ ಹಾಸನ ಹಾಸನಾಂಬ ಹೆಲಿರೈಡ್
ಕೆಎಸ್‌ಆರ್‌ಟಿಸಿ, ಹೊಸ ಬಸ್ ನಿಲ್ದಾಣದ ಬಳಿ
ಸಮಯ: ಬೆಳಗ್ಗೆ ೦೮:೦೦ ರಿಂದ ಸಂಜೆ ೬:೦೦.