ಬೆಂಗಳೂರು:ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವೇಳೆ ಕೇಳಲಾಗುತ್ತಿದ್ದ ಕೆಲವು ಅಸಂಬದ್ಧ ಪ್ರಶ್ನೆಗಳಿಗೆ ವಿನಾಯಿತಿ ನೀಡಿ ಸರ್ಕಾರ ಮೌಖಿಕ ಅದೇಶ ಹೊರಡಿಸಿದೆ.
ಸಮೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಮನೆಯಲ್ಲಿ ಎಷ್ಟು ಕುರಿ ಮತ್ತು ಕೋಳಿಗಳಿವೆ, ಎಷ್ಟು ಚಿನ್ನ ಇದೆ, ಮನೆ ಸ್ವಂತದ್ದಾ, ನಿಮಗೆ ಜಮೀನು ಎಷ್ಟಿದೆ ಎಂಬ ಪ್ರಶ್ನೆಗಳಿಗೆ ಬ್ರೇಕ್ ಹಾಕುವಂತೆ ಗಣತಿದಾರರಿಗೆ ಸೂಚಿಸಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತಿತರರು ಇಂತಹ ಇರಿಸು ಮುರಿಸು ಪ್ರಶ್ನೆ ಕೇಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅಸಂಬದ್ಧ ಪ್ರಶ್ನೆ ಕೇಳದಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ.
2.66 ಲಕ್ಷ ಕುಟುಂಬಗಳ ಸಮೀಕ್ಷೆ;
ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆರಂಭದಿಂದಲೂ ಹಲವಾರು ವಿಘ್ನಗಳು ಎದುರಾಗಿದ್ದರೂ ಇದುವರೆಗೂ 2.66 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಈವರೆಗೆ 2.66 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ.
5 ನಗರ ಪಾಲಿಕೆಗಳಲ್ಲಿ ಸೋಮವಾರ ಸಂಜೆ 7 ಗಂಟೆಯವರೆಗೆ 1,41,442 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ.ಸಮೀಕ್ಷಾದಾರರು ನಿಮ್ಮ ಮನೆಗಳಿಗೆ ಬರುವ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಹಕರಿಸಬೇಕು ಎಂದು ಜಿಬಿಎ ಮನವಿ ಮಾಡಿಕೊಂಡಿದೆ.
ಆನ್‌ಲೈನ್ ಸೌಲಭ್ಯ:
ನಾಗರಿಕರು ಸ್ವತಃ ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿಪಾಲ್ಗೊಳ್ಳಬಹುದಾಗಿದೆ.
ವೆಬ್ ಸೈಟ್ ಲಿಂಕ್: ಕೆಎಸ್‌ಸಿಬಿಸಿಸೆಲ್ಫ್ ಡಿಕ್ಲೆರೇಷನ್.ಕರ್ನಾಟಕ.ಗಾವ್‌ಇನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸಮೀಕ್ಷೆ ವಿವರ:1. ಕೇಂದ್ರ ನಗರ ಪಾಲಿಕೆ ಯಲ್ಲಿ 31,8152. ಪೂರ್ವ ನಗರ ಪಾಲಿಕೆ : 38,3743. ಉತ್ತರ ನಗರ ಪಾಲಿಕೆ : 68,6394. ದಕ್ಷಿಣ ನಗರ ಪಾಲಿಕೆ : 39,3155. ಪಶ್ಚಿಮ ನಗರ ಪಾಲಿಕೆ : 87,923ದಿನಗಳಲ್ಲಿ ಸಮೀಕ್ಷೆಯಾದ ಒಟ್ಟು ಮನೆಗಳು: 2,66,066