ಬೆಂಗಳೂರಿನ ವೀರಣ್ಣಪಾಳ್ಯ ಲೇಬರ್ ಶೆಡ್ ನಲ್ಲಿ ಸ್ನೇಹಿತ ನಡುವೆ ಶುರುವಾಗಿದ್ದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಾರ್ಖಂಡ್ ಮೂಲದ ರಾಜು ಕೊಲೆಯಾದವ, ಸ್ನೇಹಿತ ರಾಘು ಕೊಲೆಗಾರ.
ಒಂದೇ ಶೆಡ್ ನಲ್ಲಿ ನಾಲ್ವರು ಸ್ನೇಹಿತರು ವಾಸ್ತವ್ಯವಿದ್ದರು. ಎರಡು ದಿನದ ಹಿಂದೆ ರಾಜು ಮತ್ತು ರಾಘು ಮಧ್ಯೆ ಗಲಾಟೆ ಆರಂಭವಾಗಿ ಮುಂದುವರಿದಿತ್ತು. ಉಳಿದಿಬ್ಬರು ಸ್ನೇಹಿತರು ಕೆಲಸಕ್ಕೆ ತೆರಳಿದ್ದಾಗ ಮನೆಯಲ್ಲಿಯೇ ಇದ್ದ ರಾಜು ಮತ್ತು ರಾಘು ಮಧ್ಯೆ ಗಲಾಟೆಯಾಗಿ ರಾಜುವಿನ ಕತ್ತು ಕೊಯ್ದು ರಾಘು ಕೊಲೆ ಮಾಡಿದ್ದಾನೆ.
ಸ್ನೇಹಿತರು ರಾತ್ರಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು, ಕೊಲೆ ಆರೋಪಿ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ತೆರಳಿದ್ದ, ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೆಚ್ಚಿನ ವರದಕ್ಷಿಣೆ ತರಲಿಲ್ಲವೆಂದು ಗರ್ಭಿಣಿಯ ಕೊಲೆ
ಉತ್ತರ ಪ್ರದೇಶದಲ್ಲಿ ಹೆಚ್ಚುವರಿ ವರದಕ್ಷಿಣೆ ಹಣವನ್ನು ನೀಡಲಿಲ್ಲವೆಂದು ಗರ್ಭಿಣಿಯನ್ನು ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆ. ಹೆಚ್ಚುವರಿ 5 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ನಂತರ ಪತಿ ಮತ್ತು ಅವರ ಕುಟುಂಬದವರು ಗರ್ಭಿಣಿಯನ್ನು ಕೊಂದಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೈನ್ಪುರಿ ಜಿಲ್ಲೆಯ ಗೋಪಾಲಪುರ ಗ್ರಾಮದ ರಜನಿ ಕುಮಾರಿ (21) ಕೊಲೆಯಾದ ಗರ್ಭಿಣಿ. ಆಕೆಗೆ ಮದುವೆ ಮಾಡುವಾಗ ಕುಟುಂಬವು ವರದಕ್ಷಿಣೆಯಾಗಿ ಚಿನ್ನ ಮತ್ತು ಹಣ ನೀಡಿದೆ. ಪತಿ ಸಚಿನ್ ಮತ್ತು ಸಹೋದರರು ಹೆಚ್ಚುವರಿ ವರದಕ್ಷಿಣೆಗಾಗಿ ರಜನಿ ಕುಮಾರಿಗೆ ಕಿರುಕುಳ ನೀಡುತ್ತಿದ್ದರು. ರಜನಿ ಕುಮಾರಿ ವರದಕ್ಷಿನೆ ಹಣ ತವರಿನಿಂದ ತರಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಪತಿ ಸಚಿನ್ ಮತ್ತು ಸಹೋದರರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.