ನಾಲ್ಕು ತಿಂಗಳ ಗಂಡು ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಯೋರೈ ತಾಲೂಕಿನ ತಲ್ವಾಡಾ ಗ್ರಾಮದಲ್ಲಿ ನಡೆದಿದೆ.
ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ ಡ್ರಮ್‌ಗೆ ಎಸೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಲಾಬಿ ಬಣ್ಣದ ಟಿ-ಶರ್ಟ್, ಡೈಪರ್ ಧರಿಸಿದ್ದ ಮಗು ನೀರಿನಲ್ಲಿ ಮುಖ ಕೆಳಗಾಗಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗುವಿನ ತಂದೆ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೌಟುಂಬಿಕ ಕಲಹದ ನಂತರ ಅಮೋಲ್ ಮತ್ತು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಅಮೋಲ್ ಮತ್ತು ಮಗುವಿನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಲ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಕಾರು ಡಿಕ್ಕಿಯಾಗಿ ಮೂವರು ಮಹಿಳೆಯರ ಸಾವು
ವೇಗವಾಗಿ ಬಂದ ಕಾರು ನಾಲ್ವರು ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ಗಾಜಿಯಾಬಾದ್‌ನ ಸಿಹಾನಿ ಗೇಟ್ ಪ್ರದೇಶದಲ್ಲಿ ನಡೆದಿದೆ.
ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಮೂವರು ಮಹಿಳೆಯರು ರಸ್ತೆ ದಾಟುತ್ತಿರುವಾಗ ಈ ದುರಂತ ಸಂಭವಿಸಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿಯಲ್ಲಿ ದಾಖಲಾಗಿದೆ.
ಮೂವರು ಮಹಿಳೆಯರು ಒಬ್ಬ ಪುರುಷನೊಂದಿಗೆ ರಸ್ತೆ ದಾಟುತ್ತಿರುವಾಗ ಕಾರು ಇದ್ದಕ್ಕಿದ್ದಂತೆ ಅವರಿಗೆ ಡಿಕ್ಕಿ ಹೊಡೆದು ಡಿವೈಡರ್ಗೆ ಡಿಕ್ಕಿ ಹೊಡೆದಿದೆ.