Menu

ವೆಸ್ಟ್ ಇಂಡೀಸ್ ಇನಿಂಗ್ಸ್ ಸೋಲು; ಭಾರತದ ಗೆಲುವಿನಲ್ಲಿ ಮಿಂಚಿದ ಜಡೇಜಾ, ಸಿರಾಜ್!

jadeja

ಅಹಮದಾಬಾದ್ : ಉಪನಾಯಕ ರವೀಂದ್ರ ಜಡೇಜಾ ಅವರ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್ ಗಳ ಭಾರೀ ಅಂತರದಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-07ಯಿಂದ ಮುನ್ನಡೆ ಪಡೆದಿದೆ.

286 ರನ್ ಗಳ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಮುಂದುವರಿಸಿದ ವೆಸ್ಟ್ ಇಂಡೀಸ್ ತಂಡ 45.1 ಓವರ್ ಗಳಲ್ಲಿ 146 ರನ್ ಗೆ ಆಲೌಟಾಯಿತು. ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೆ 448 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ ತಂಡ ಸುಮಾರು ಎರಡೂವರೆ ದಿನದಾಟದಲ್ಲೇ ಗೆದ್ದು ಬೀಗಿದೆ.

ವೆಸ್ಟ್ ಇಂಡೀಸ್ ತಂಡ ಮೊದಲ ಇನಿಂಗ್ಸ್ ನಲ್ಲಿ 162 ರನ್ ಗಳಿಸಿದ್ದರೆ ಎರಡನೇ ಇನಿಂಗ್ಸ್ ನಲ್ಲಿ ನಿರೀಕ್ಷೆಗೂ ಮೊದಲೇ ಪಂದ್ಯ ಕೈ ಚೆಲ್ಲಿತು.

ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿದರೆ, ಮೊಹಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದರು.  ಈ ಪಂದ್ಯದಲ್ಲಿ ಭಾರತದ ಪರ ಮೂವರು ಬ್ಯಾಟ್ಸ್ ಮನ್ ಗಳು ಶತಕ ಸಿಡಿಸಿದರು.

Related Posts

Leave a Reply

Your email address will not be published. Required fields are marked *