Menu

ರಾಹುಲ್, ಜುರೆಲ್, ಜಡೇಜಾ ಶತಕ: ಭಾರತಕ್ಕೆ ಭಾರೀ ಮುನ್ನಡೆ

kl rahul

ಅಹಮದಾಬಾದ್: ಮೂವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರೀ ಮುನ್ನಡೆ ದಾಖಲಿಸಿದ್ದು, ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಹೀನಾಯ ಸೋಲಿನ ಭೀತಿಗೆ ಸಿಲುಕಿದೆ.

ಪಂದ್ಯದ ಎರಡನೇ ದಿನವಾದ ಶುಕ್ರವಾರ 2 ವಿಕೆಟ್ ಗೆ 121 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಗಳಿಸಿದೆ. ಇದರೊಂದಿಗೆ ಭಾರತ 226 ರನ್ ಗಳ ಭಾರೀ ಮುನ್ನಡೆ ದಾಖಲಿಸಿದೆ.

ಭಾರತದ ಪರ ಕೆಎಲ್ ರಾಹುಲ್, ಧ್ರುವ ಜುರೆಲ್ ಮತ್ತು ರವೀಂದ್ರ ಜಡೇಜಾ ಶತಕ ಬಾರಿಸಿ ತಂಡವನ್ನು ಆಧರಿಸಿದರು.

197 ಎಸೆತಗಳನ್ನು ಎದುರಿಸಿದ ರಾಹುಲ್ 12 ಬೌಂಡರಿ ಸಹಾಯದಿಂದ ಶತಕ ಪೂರೈಸಿ ಜೊಮೆಲ್ ವಾರಿಯರ್ ಎಸೆತದಲ್ಲಿ ಔಟಾದರು. ಇದು ರಾಹುಲ್ ಪಾಲಿಗೆ 11ನೇ ಟೆಸ್ಟ್ ಶತಕವಾಗಿದೆ.

ರಾಹುಲ್ ತವರಿನಲ್ಲಿ 3211 ದಿನಗಳ ನಂತರ ದಾಖಲಿಸಿದ ಮೊದಲ ಶತಕ ಇದಾಗಿದೆ. ಚೆನ್ನೈನಲ್ಲಿ 2011ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು.

ರಾಹುಲ್ ತಮ್ತು ಶುಭಮನ್ ಗಿಲ್ 3ನೇ ವಿಕೆಟ್ ಗೆ 98 ರನ್ ಜೊತೆಯಾಟ ನಿಭಾಯಿಸಿದರು. ನಾಯಕ ಗಿಲ್ 100 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ ಬರೋಬ್ಬರಿ ಅರ್ಧಶತಕ (50) ಬಾರಿಸಿ ನಿರ್ಗಮಿಸಿದರು.

ನಂತರ ಧ್ರುವ ಜುರೆಲ್ ಮತ್ತು ಉಪನಾಯಕ ರವೀಂದ್ರ ಜಡೇಜಾ ಶತಕಗಳನ್ನು ಬಾರಿಸಿದ್ದೂ ಅಲ್ಲದೇ 5ನೇ ವಿಕೆಟ್ ಗೆ 206 ರನ್ ಗಳ ಜೊತೆಯಾಟ ನಿಭಾಯಿಸಿ ತಂಡದ ಮೊತ್ತ 400ರ ಗಡಿ ದಾಟುವಂತೆ ನೋಡಿಕೊಂಡರು.

210 ಎಸೆಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ ಧ್ರುವ ಜುರೆಲ್ ಚೊಚ್ಚಲ ಶತಕ ದಾಖಲಿಸಿದರೆ, ರವೀಂದ್ರ ಜಡೇಜಾ 176 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 104 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

Related Posts

Leave a Reply

Your email address will not be published. Required fields are marked *