Menu

ಐಶ್ವರ್ಯ ಗೌಡಗೆ ಸೇರಿದ 3.98 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

aishwarya gowda

ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಆರೋಪ ಹೊತ್ತಿರುವ ಐಶ್ವರ್ಯಾ ಗೌಡ ಅವರಿಗೆ ಸಂಬಂಧಿಸಿದ 3.98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಐಶ್ವರ್ಯಗೌಡ ಅವರಿಗೆ ಸೇರಿದ ಅಂದಾಜು 2.01 ಕೋಟಿ ರೂ. ಸ್ಥಿರಾಸ್ತಿ ಮತ್ತು ಅಂದಾಜು 1.97 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಐಶ್ವರ್ಯಗೌಡ ಅವರಿಗೆ ಸಂಬಂಧಿಸಿದ ಒಟ್ಟು 3.98 ಕೋಟಿ ರೂ. ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಐಶ್ವರ್ಯ ಗೌಡ ಅವರ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲಾಟ್​ ಮೇಲೆ ಇಡಿ ಅಧಿಕಾರಿಗಳು ಏಪ್ರಿಲ್​​ 24 ರಂದು ದಾಳಿ ಮಾಡಿದ್ದರು.

ಐಶ್ವರ್ಯ, ಆಕೆಯ ಪತಿ ಹರೀಶ್ ಮತ್ತು ಇತರರ ವಿರುದ್ಧ ತನಿಖೆ ನಡೆಸಿದ್ದ ಇಡಿ ಆರೋಪಿಗಳು ಹೆಚ್ಚಿನ ಲಾಭ ನೀಡುವುದಾಗಿ ಹಣ ಪಡೆದಿದ್ದರು. ಆದರೆ ಪಡೆದ ಹಣವನ್ನ ವಾಪಸ್ ನೀಡದೆ ವಂಚಿದ್ದರು. ಆರೋಪಿಗಳ ವಿರುದ್ಧ ಹಣ ನೀಡಿದವರಿಗೆ ದೊಡ್ಡ ರಾಜಕಾರಣಿಗಳ ಹೆಸರು ಹೇಳಿ ಬೆದರಿಕೆ ಹಾಕಿದ್ದ ಆರೋಪ ಇತ್ತು.

ಐಶ್ವರ್ಯ ಗೌಡ, ವಿನಯ್ ಕುಲಕರ್ಣಿ ಮನೆಗಳ ಮೇಲೆ ಇ.ಡಿ ದಾಳಿ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ ಮಾಡಿತ್ತು. ದಾಳಿ ವೇಳೆ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲೆಗಳು ಸಿಕ್ಕಿದ್ದವು. ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಐಶ್ವರ್ಯ ಮತ್ತು ಇತರರಿಗೆ ಸಂಬಂಧಿಸಿದ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಐಶ್ವರ್ಯ ಗೌಡಗೆ ಜಾಮೀನು

ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯ ಐಶ್ವರ್ಯಾ ಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ನ್ಯಾಯಾಲಯ ಐಶ್ವರ್ಯ ಗೌಡ ಅವರಿಗೆ ಐದು ಲಕ್ಷ ರೂ. ಮೌಲ್ಯದ ಶ್ಯೂರಿಟಿ ಬಾಂಡ್‌ ಹಾಗೂ ಹಲವು ಷರತ್ತುಗಳನ್ನು ವಿಧಿಸಿತ್ತು.

Related Posts

Leave a Reply

Your email address will not be published. Required fields are marked *