ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ 15.50 ರೂ.ನಿಂದ 16.50 ರೂ.ವರೆಗೆ ಏರಿಕೆಯಾಗಿದ್ದು, ಹೊಸ ದರವು ಇಂದಿನಿಂದಲೇ ಜಾರಿಗೆ ಬಂದಿದೆ.
ಸೆಪ್ಟೆಂಬರ್ 1ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 51.50 ರೂ. ಕಡಿಮೆಯಾಗಿತ್ತು, ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆ ಇಳಿಕೆ ಮಾಡಲಾಗಿತ್ತು. ದೆಹಲಿಯಲ್ಲಿ 138 ರೂ., ಕೋಲ್ಕತ್ತಾದಲ್ಲಿ 144 ರೂ., ಮುಂಬೈನಲ್ಲಿ 139 ರೂ., ಮತ್ತು ಚೆನ್ನೈನಲ್ಲಿ 141.50 ರೂ. ಕಡಿಮೆಯಾಗಿತ್ತು. ಈಗ ದಿಢೀರ್ ಏರಿಕೆಯಾಗಿ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಒತ್ತಡವುಂಟಾಗಿದೆ. ಈ ಬೆಲೆ ಏರಿಕೆಯಿಂದ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಮತ್ತು ಇತರ ವಾಣಿಜ್ಯ ಘಟಕಗಳಿಗೆ ವೆಚ್ಚದ ಹೊರೆ ಹೆಚ್ಚಾಗಬಹುದು.
ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಏಪ್ರಿಲ್ 8ರಂದು ಗೃಹಬಳಕೆಯ ಸಿಲಿಂಡರ್ಗಳ ಬೆಲೆಯನ್ನು 50 ರೂ. ಹೆಚ್ಚಿಸಲಾಗಿತ್ತು, ಆದರೆ ಈಗಿನ ಏರಿಕೆ ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್ಗಳಿಗೆ ಸೀಮಿತವಾಗಿದೆ.
ದಿಲ್ಲಿಯಲ್ಲಿ 19 ಕೆಜಿ ಸಿಲಿಂಡರ್ನ ಬೆಲೆ ಈಗ 1,595.50 ರೂ. ಅಂದರೆ 15.50 ರೂ. ಏರಿಕೆ, ಕೋಲ್ಕೊತಾದಲ್ಲಿ 1,700.50 ರೂ.- 16.50 ರೂ. ಏರಿಕೆ. ಮುಂಬೈನಲ್ಲಿ 1,547 ರೂ.-15.50 ರೂ. ಏರಿಕೆ. ಚೆನ್ನೈನಲ್ಲಿ 1,754.50 ರೂ.- 16.50 ರೂ. ಏರಿಕೆಯಾಗಿದೆ.