ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಕೆಆರ್ಎಸ್ ಜಲಾಶಯ ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ.
ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗುವಂತೆ ಕಾಣಿಸುತ್ತಿದೆ. 45 ವರ್ಷಗಳ ಬಳಿಕ ಜೂನ್ನಲ್ಲಿ ಕೆಆರ್ಎಸ್ ಡ್ಯಾಂ ಭರ್ತಿಯಾಗುತ್ತಿರುವುದಕ್ಕೆ ರೈತರು ಸಂತಸಗೊಂಡಿದ್ದಾರೆ.
ಇಂದಿನ ಗರಿಷ್ಟ ನೀರಿನ ಮಟ್ಟ:124.80 ಅಡಿ, ಇಂದಿನ ನೀರಿನ ಮಟ್ಟ: 120.20 ಅಡಿ, ಡ್ಯಾಂನ ಒಳಹರಿವು: 13856 ಕ್ಯೂಸೆಕ್, ಡ್ಯಾಂನ ಹೊರ ಹರಿವು: 1965 ಕ್ಯೂಸೆಕ್, ಪ್ರಸ್ತುತ ನೀರಿನ ಸಂಗ್ರಹ 43.298 ಟಿಎಂಸಿ ದಾಖಲಾಗಿದೆ.