ಬೆಂಗಳೂರಿನಲ್ಲಿ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ 7.80 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಎಂಡಿಎಂಎ ಕ್ರಿಸ್ಟಲ್ 3.8 ಕೆಜಿ, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್ , 42 ಗ್ರಾಂ ತೂಕದ 82 ಎಕ್ಸಟೆಸಿ ಮಾತ್ರೆಗಳು, 23 ಕೆಜಿ ಗಾಂಜಾ ಹಾಗೂ 482 ಗ್ರಾಂ ಹೈಡ್ರೋ ಗಾಂಜಾಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.
ಪ್ರಕರಣದಲ್ಲಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಕೆವಿನ್ ರೋಜರ್, ಥಾಮಸ್ ನವೀದ್ ಚೀಮ್ ಬಂಧಿತ ಆರೋಪಿಗಳು. ಸಿಸಿಬಿ ಹಾಗೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಆರೋಪಿಗಳು ದೆಹಲಿ ಮತ್ತು ಮುಂಬಯಿಂದ ಡ್ರಗ್ಸ್ ತರಿಸುತ್ತಿದ್ದರು. ಹೆಬ್ಬಗೋಡಿಯಲ್ಲಿ ಮನೆ ಮಾಡಿ ಡ್ರಗ್ಸ್ ಮಾರಾಟ ಕುದುರಿಸುತ್ತಿದ್ದರು. ವಾಟ್ಸಪ್ ಮೂಲಕ ಲೋಕೇಷನ್ ಡ್ರಾಪ್ ಮಾಡಿ ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದರು.
ಆನ್‌ಲೈನ್ ಮೂಲಕ ನೈಜೀರಿಯಾ ಮೂಲದ ಆರೋಪಿಗಳು ಪೇಮೆಂಟ್ ಮಾಡುತ್ತಿದ್ದರು. ಅಪರಿಚಿತ ಸ್ಥಳಗಳಲ್ಲಿ ಡ್ರಗ್ಸ್ ಪಾರ್ಸೆಲ್ ಇಟ್ಟು ಗಿರಾಕಿಗಳಿಗೆ ಲೊಕೇಷನ್ ಕಳಿಸ್ತಿದ್ದರು.
ಅಪ್ರಾಪ್ತ ವಯಸ್ಕ ದರೋಡೆಕೋರರ ಗ್ಯಾಂಗ್ ಅರೆಸ್ಟ್
ಬೆಂಗಳೂರು ಹೊರವಲಯದಲ್ಲಿ ದರೋಡೆ ನಡೆಸುತ್ತಿದ್ದ ಅಪ್ರಾಪ್ತ ವಯಸ್ಕರ ಗ್ಯಾಂಗ್ ಅನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆರು ಜನ ಅಪ್ರಾಪ್ತ ವಯಸ್ಕರು ಸೇರಿ ಅಪರಾಧ ಹಿನ್ನಲೆ ಇರುವ ಒಬ್ಬನನ್ನು ಒಳಗೊಂಡಿದ್ದ ತಂಡವನ್ನು ಬಂಧಿಸಲಾಗಿದೆ. ಮೂರು ದಿನಗಳಲ್ಲಿ 37 ಕಡೆ ಈ ಗ್ಯಾಂಗ್ ದರೋಡೆ ನಡೆಸಿತ್ತು.
ಮಾದನಾಯಕನಹಳ್ಳಿ, ದೊಡ್ಡಬಳ್ಳಾಪುರ, ಸೂರ್ಯನಗರ, ನೆಲಮಂಗಲ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಗ್ಯಾಂಗ್ ಕಳ್ಳತನ ನಡೆಸಿತ್ತು. ರಾತ್ರಿ ಮೂರು ಬೈಕ್ಗಳಲ್ಲಿ ಸುತ್ತುತ್ತಿದ್ದ ಗ್ಯಾಂಗ್ ಕಾರು, ಲಾರಿ ಅಡ್ಡಗಟ್ಟಿ ಸುಲಿಗೆ ಮಾಡುತ್ತಿತ್ತು. ಹಣ ಕೊಡಲು ನಿರಾಕರಿಸಿದರೆ ಚಾಕು ಹಾಕಿ ಓಡಿ ಹೋಗುತ್ತಿತ್ತು. ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದ ಬಳಿಕ ವಿಶೇಷ ತಂಡ ರಚಿಸಿಕಾರ್ಯಾಚರಣೆ ಕೈಗೊಂಡಿದ್ದರು.