ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿವೃತ್ತ ನರ್ಸ್ ಎಡವಟ್ಟಿನಿಂದ ತಾಯಿ ಮಗು ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ.
ಇಂಗಳಗಿ ಗ್ರಾಮದ ನಿವಾಸಿ ಶ್ರೀದೇವಿ ಪ್ರಭಾನೂರ್ (28) ಹಾಗೂ ನವಜಾತ ಶಿಶು ಮೃತಪಟ್ಟಿದೆ. ಮೃತ ಶ್ರೀದೇವಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಈ ಬಾರಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು.
ನಿವೃತ್ತ ಆರೋಗ್ಯ ಸಹಾಯಕಿ ಗಂಗುಬಾಯಿ ಬಳಿ ಶ್ರೀದೇವಿ ಹೆರಿಗೆಗೆ ದಾಖಲಾಗಿದ್ದು, ಹೆರಿಗೆ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿವೃತ್ತ ನರ್ಸ್ ಎಡವಟ್ಟಿ ನಿಂದಲೇ ತಾಯಿ ಹಾಗೂ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿರುದ್ಧ ಕ್ರಮಜರುಗಿಸುವಂತೆ ವಾಡಿ ಪೊಲೀಸರಿಗೆ ಮಹಿಳೆಯ ಪತಿ ದೂರು ನೀಡಿದ್ದಾರೆ.