ಆಯುಧ ಪೂಜೆ ದಿನ ಕುಡಿಯಲು ಪೂರೈಕೆಯಾಗುವ ಕಾವೇರಿ ನೀರಲ್ಲಿ ಕಾರು, ಬೈಕ್ ಸೇರಿದಂತೆ ವಾಹನಗಳನ್ನು ತೊಳೆಯುವಂತಿಲ್ಲ. ದಸರಾ ಹಬ್ಬದ ಸಂಭ್ರಮಕ್ಕೆ ಕಾವೇರಿ ನೀರು ಪೋಲು ಮಾಡಿದರೆ ದಂಡ ಪಾವತಿಸಬೇಕಾಗಬಹುದು.
ಕಾವೇರಿ ನೀರು ಕುಡಿಯುವುದಕ್ಕೆ ಬಳಕೆಗೆ ಸರಬರಾಜಾಗುವುದು. ಅನಗತ್ಯವಾಗಿ ನೀರು ಪೋಲು ಮಾಡುವುದು, ಕುಡಿಯುವ ನೀರನ್ನು ವಾಹನ ಸ್ವಚ್ಛತೆ, ಕಟ್ಟಡ ನಿರ್ಮಾಣಕ್ಕೆ ಬಳಸಿದರೆ ನಿಯಮಾನುಸಾರ ದಂಡ ಬೀಳುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.
ನೀರು ಪೋಲು ಮಾಡುವರ ವಿರುದ್ಧ 1964 ರ ಕಾಯಿದೆಯ ಕಲಂ 109 ರಂತೆ 5000 ರೂ. ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮರುಕಳಿದರೆ 5000 ಜೊತೆಗೆ ಹೆಚ್ಚುವರಿಯಾಗಿ 500 ದಂಡ ಪಾವತಿಸಬೇಕಾಗುತ್ತದೆ.