Sunday, September 28, 2025
Menu

ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 5 ಪ್ರಮುಖ ಕಾರಣಗಳು

ನಟ ಹಾಗೂ ರಾಜಕಾರಣಿ ವಿಜಯ್ ಶನಿವಾರ ಕರೂರಿನಲ್ಲಿ ನಡೆದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವಿಜಯ್ ಭಾನುವಾರ ಸಾಮಾಜಿಕ ಮಾಧ್ಯಮದ ಮೂಲಕ ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ 20 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು.

“ಶನಿವಾರ ಕರೂರಿನಲ್ಲಿ ನಡೆದ ದುರಂತದಿಂದ ನನ್ನ ಹೃದಯ ಮತ್ತು ಮನಸ್ಸು ಭಾರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತಾ, ಈ ದುಃಖವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ನಿಜಕ್ಕೂ ನಮಗೆ ತುಂಬಲಾರದ ನಷ್ಟ. ಘಟನೆಯಿಂದ ನನ್ನ ಹೃದಯ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಯಾರೇ ಸಾಂತ್ವನದ ಮಾತುಗಳನ್ನು ಹೇಳಿದರೂ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ನಿಮ್ಮ ಕುಟುಂಬದ ಸದಸ್ಯನಾಗಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ರೂ. ನೀಡಲು ನಾನು ಉದ್ದೇಶಿಸಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಈ ಮೊತ್ತವು ಗಮನಾರ್ಹವಾಗಿಲ್ಲ. ಆದರೂ, ಈ ಕ್ಷಣದಲ್ಲಿ, ನಿಮ್ಮ ಕುಟುಂಬಕ್ಕೆ ಸೇರಿದವನಾಗಿ, ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ” ಎಂದು ವಿಜಯ್ ಹೇಳಿದ್ದಾರೆ.

ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ್ಮೆಲ್ಲರ ಪ್ರೀತಿಪಾತ್ರರು ಬೇಗನೆ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇನ್ನು, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವು ತಮಿಳುನಾಡಿನಾದ್ಯಂತ ವಾರಾಂತ್ಯ ರ‍್ಯಾಲಿಗಳನ್ನು ನಡೆಸುತ್ತಿದ್ದು, ಶನಿವಾರ ಕರೂರಿನಲ್ಲಿ ನಡೆದ ಕಾರ್ಯಕ್ರಮವು ನಿರ್ವಹಣಾ ಸಮಸ್ಯೆಯಿಂದ ಜನಸಂದಣಿಗೆ ಕಾರಣವಾಗಿ ದುರಂತಕ್ಕೆ ದಾರಿ ಕಲ್ಪಿಸಿತು.

ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 5 ಪ್ರಮುಖ ಕಾರಣಗಳು

  • ರ‍್ಯಾಲಿಗೆ ನಟ ನಟ-ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ತಡವಾಗಿ ಆಗಮನ. ಮಧ್ಯಾಹ್ನದಿಂದ ಕಾಯುತ್ತಿದ್ದ ಫ್ಯಾನ್ಸ್ ಸಹನಶೀಲತೆ ಕಳೆದುಕೊಂಡರು.
  • ಸಾವಿರ ಜನರ ನಿರೀಕ್ಷೆಗೆ ಬದಲಾಗಿ 27 ಸಾವಿರ ಜನರು ಸೇರಿದರು. ವಿಜಯ್ ನೋಡಲು ಜನರು ಗುಡಸಿಲು, ಟ್ರಾನ್ಸ್‌ಫಾರ್ಮ್ ಮೇಲೇರಿದರು.
  • ವಿಜಯ್‌ ಅವರ ರ‍್ಯಾಲಿಗೆ ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ರ್ಯಾಲಿ ನಡೆಸಲು ಅನುಮತಿ ನೀಡಲಾಗಿತ್ತು. ಆದರೂ, ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳು ಬೆಂಬಲಿಗರನ್ನು ಮಧ್ಯಾಹ್ನದಿಂದಲೇ ಸೇರುವಂತೆ ಕೇಳಿಕೊಂಡಿದ್ದರಿಂದ ಸ್ಥಳದಲ್ಲಿ ಭಾರೀ ಜನಸಂದಣಿ ಸೇರಿತ್ತು.
  • ವಿಜಯ್ ಭಾಷಣದ ವೇಳೆ ಪವರ್ ಕಟ್ ಆಗಿತ್ತು. ಬಾಲಕಿಯೊಬ್ಬಳು ಕಾಣೆಯಾದ ಕಾರಣ ಉಂಟಾದ ಗೊಂದಲದಿಂದ ಜನರ ನಡುವೆ ಗದ್ದಲ ಹೆಚ್ಚಾಗಿತ್ತು.
  • ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಸಮಯದಲ್ಲಿ ಲಾಠಿ ಚಾರ್ಜ್ ಮಾಡಲಾಯಿತು. ಲಾಠಿ ಚಾರ್ಜ್ ವೇಳೆ ಜನ ಭಯಭೀತರಾಗುತ್ತಾ ಓಡಿದರು.

Related Posts

Leave a Reply

Your email address will not be published. Required fields are marked *