Sunday, September 28, 2025
Menu

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 860 ಕೋಟಿ ಮಂಜೂರು: ದಿನೇಶ್ ಗುಂಡುರಾವ್

ಬಡವರ ಬಗ್ಗೆ ಚಿಂತಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಜಾತಿಗಳ ನಡುವೆ ವಿಷಯ ವಿಷ ಬೀಜ ಬಿತ್ತುವ ಕೆಲಸ ಬಿಜೆಪಿ ಮಾಡುತ್ತದೆ ಮತ್ತು ಅದು ಕೆಲಸಕ್ಕೆ ಬಾರದ ಪಕ್ಷವಾಗಿದೆ ಎಂದು ಅವರು ಹೇಳಿದ್ದಾರೆ.

ಅವರು ಸಿಂಧನೂರು ನಗರದ ಸರ್ಕಿಟ್ ಹೌಸ್ ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರೈತರ, ದೀನ ದಲಿತರ, ಬಡವರ ಹಾಗೂ ಇನ್ನಿತರ ಸಮಾಜದವರ ಕಷ್ಟಗಳನ್ನು ಆಲಿಸುವ ಕೆಲಸ ಕಾಂಗ್ರೆಸ್ ಸದಾ ಮಾಡುತ್ತಿದ್ದು, ಇದನ್ನು ಸಹಿಸಿಕೊಳ್ಳದ ಬಿಜೆಪಿ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಕಾಂಗ್ರೆಸ್ ಮೇಲೆ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಮಾಡೋದು ಗೊತ್ತಿಲ್ಲ; ಜಗಳ ಹಚ್ಚುವ ಕೆಲಸ ಮಾತ್ರ ಗೊತ್ತಿದೆ. ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುತ್ತಾರೆ ಎಂದರು.

ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡರಾವ್ ಮಾತನಾಡಿ, ಜಾತಿ ಜನಗಣತಿಯ ಅವಧಿ ಒಳಗೆ ಎಲ್ಲಾ ಶಿಕ್ಷಕರು ಮೂಗಿಸುತ್ತಾರೆ, ಇದರ ಬಗ್ಗೆ ಬಿಜೆಪಿ ಅವರು ಪ್ರಶ್ನಿಸುವ ಕೆಲಸ ಮಾಡುತ್ತಾರೆ. ಯಾರೇ ಇರಲಿ, ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ಕೆಲಸ ಮಾಡಬಾರದು ಎಂದರು.

ಆರೋಗ್ಯ ಇಲಾಖೆಗೆ 860 ಕೋಟಿ ರೂ. ಮಂಜೂರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಆಸ್ಪತ್ರೆಗಳ ಕಟ್ಟಡ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ 860 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೆಕೆಆರ್‌ಡಿ ಮೂಲಕ 320 ಕೋಟಿ ರೂ. ಸರ್ಕಾರ ಅನುದಾನ ನೀಡಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸರ್ಕಾರದಿಂದ ಆಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಪರ ನಿಂತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಆರ್. ಬಸನಗೌಡ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಎ. ವಸಂತ್ ಕುಮಾರ್, ಶರಣೇಗೌಡ ಬಯ್ಯಾಪುರ, ಜಿಲ್ಲಾ ಅಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತಿ ಮುಖ್ಯ ಅಧಿಕಾರಿ ಈಶ್ವರ್ ಕುಮಾರ, ಜಿಲ್ಲಾ ಪೊಲೀಸ್ ಅಧಿಕಾರಿ ಪುಟ್ಟ ಮಾದಯ್ಯ ಇದ್ದರು.

Related Posts

Leave a Reply

Your email address will not be published. Required fields are marked *