Menu

ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ 14 ಲಕ್ಷ ರೂ. ವಂಚನೆ ಆರೋಪ

gold suresh

ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದೀನ್ ಆರೋಪ ಮಾಡಿದ್ದು, ಕೇಬಲ್ ಚಾನೆಲ್ ಸೆಟ್‌ಅಪ್ ಮಾಡುವ ಒಪ್ಪಂದದಡಿ ಸುರೇಶ್ 14 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಅವರು ಹೇಳಿದ್ದಾರೆ.

ಹಣ ಪಡೆದು ಕೆಲಸವನ್ನು ಅರ್ಧಕ್ಕೆ ಬಿಟ್ಟು ಹಣ ಮರಳಿ ನೀಡದೆ ವಂಚಿಸಿದ್ದಾರೆ ಎಂದು ಮೈನುದ್ದೀನ್ ದೂರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.

2017ರಲ್ಲಿ ಗೋಲ್ಡ್ ಸುರೇಶ್ ಮತ್ತು ಮೈನುದ್ದೀನ್ ನಡುವೆ ಕೇಬಲ್ ಚಾನೆಲ್ ಸೆಟ್‌ಅಪ್ ಯೋಜನೆಗಾಗಿ 14 ಲಕ್ಷ ರೂಪಾಯಿಗೆ ಒಪ್ಪಂದ ಆಗಿತ್ತು. ಸುರೇಶ್ ಆರಂಭದಲ್ಲಿ 4 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದರು. ಬಳಿಕ 7 ಲಕ್ಷ ರೂಪಾಯಿಕೊಡಲಾಗಿದೆ. ಆದರೆ ಕೆಲಸವನ್ನು ಅರ್ಧಕ್ಕೆ ಬಿಟ್ಟು, ಯಾವುದೇ ಮಾಹಿತಿಯನ್ನು ನೀಡದೆ ಮೌನವಾಗಿದ್ದಾರೆ ಎಂದು ಮೈನುದ್ದೀನ್ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುರೇಶ್‌ ವಿರುದ್ಧದ ಈ ಆರೋಪಗಳನ್ನು ಕೆಲವರು ಖಂಡಿಸಿದರೆ, ಇನ್ನು ಕೆಲವರು ಮೈನುದ್ದೀನ್‌ರ ದೂರಿನ ಸತ್ಯಾಸತ್ಯತೆ ತಿಳಿಯಲು ಕಾಯುತ್ತಿದ್ದಾರೆ. ಆರೋಪಗಳಿಗೆ ಸಂಬಂಧಿಸಿದಂತೆ ಗೋಲ್ಡ್ ಸುರೇಶ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Related Posts

Leave a Reply

Your email address will not be published. Required fields are marked *