Menu

ಧಾರವಾಡದಲ್ಲಿ 3 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ ತಾಯಿ ಅರೆಸ್ಟ್

ಅತಿಯಾಗಿ ಆಡ್ತಾನೆ ಎಂದು ತಾಯಿಯೊಬ್ಬಳು  ಮೂರು ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಕೈ, ಕಾಲು ಕುತ್ತಿಗೆಗೆ ಬರೆ ಹಾಕಿ ಶಿಕ್ಷೆ ವಿಧಿಸಿದ್ದು, ಆಕೆಯನ್ನು  ಧಾರವಾಡ ಪೊಲೀಸರು ಬಂಧಿಸಿದ್ದಾರೆ.

ಹಳೇ ಹುಬ್ಬಳ್ಳಿಯ ನಿವಾಸಿ 34 ವರ್ಷದ ಅನುಷಾ ಹುಲಿಮಾರ  ಬಮಧಿತ ತಾಯಿ. ಮಗು ಅಳುತ್ತದೆ,  ಅತಿಯಾಗಿ ಆಡುತ್ತದೆ, ಇದರ ನಡವಳಿಕೆ ಸರಿಯಿಲ್ಲ ಎಂದು  ತಾಯಿ ಮಗುವಿನ ಕೈ, ಕಾಲು, ಕುತ್ತಿಗೆ ಬಳಿ ಕಾದ ಕಬ್ಬಿಣದಿಂದ ಬರೆ ಎಳೆದಿದ್ದಾಳೆ.

ಮಗುವಿನ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಮಗುವಿನ ಪರಿಸ್ಥಿತಿ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಮಗುವನ್ನು ರಕ್ಷಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತಾಯಿಯನ್ನು ವಶಕ್ಕೆ ಪಡೆದಿದ್ದು, ಮಕ್ಕಳ ಹಕ್ಕು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ನಡತೆ ವಿಚಿತ್ರವಾಗಿದೆ. ಬರೆ ಹಾಕಿದರೆ ಸರಿ ಹೋಗುತ್ತದೆ ಎಂಬ ಕಾರಣಕ್ಕೆ ಮೂಢನಂಬಿಕೆಯಿಂದ ಈ ರೀತಿಯ ಘಟನೆ ನಡೆಯುತ್ತಿರುತ್ತದೆ. ಇದಕ್ಕೆ ಮೂಢನಂಬಿಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *