Sunday, September 28, 2025
Menu

‘ಬಿಗ್ ಬಾಸ್ ಕನ್ನಡ-ಸೀಸನ್ 12’ ಸೆಪ್ಟೆಂಬರ್ 28ಕ್ಕೆ ಗ್ರಾಂಡ್ ಓಪನಿಂಗ್!

ಕನ್ನಡಿಗರಿಗೆ ಮನರಂಜನೆಯನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಕಲರ್ಸ್‌ ಕನ್ನಡ, ಇದೀಗ ‘ಬಿಗ್‌ಬಾಸ್‌’ನ ಹನ್ನೆರಡನೇ ಸೀಸನ್‌ ಅನ್ನು ಹೊತ್ತು ತಂದಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಿಗರನ್ನು ಯಶಸ್ವಿಯಾಗಿ ರಂಜಿಸುತ್ತ ಬಂದಿರುವ ‘ಬಿಗ್‌ಬಾಸ್’ ರಿಯಾಲಿಟಿ ಷೋ, ಈ ಬಾರಿ “Expect the Unexpected” ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮನರಂಜನೆಯ ಹೊಸ ಭಾಷ್ಯವನ್ನು ಬರೆಯಲು ಸಜ್ಜಾಗಿದೆ.

ಸೆಪ್ಟೆಂಬರ್‍‌ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್‌ ಸೀಸನ್‌ 12ರ ಗ್ರಾಂಡ್‌ ಓಪನಿಂಗ್‌ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‍‌ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ.

ಈಗಾಗಲೇ ಬಿಗ್ ಬಾಸ್‌ನ 11 ಸೀಸನ್‌ಗಳನ್ನು ನೋಡಿ ಯಶಸ್ವಿಯಾಗಿಸಿರೋ ವೀಕ್ಷಕರ ಮನಸಲ್ಲಿ ಈ ಸೀಸನ್ ಹೇಗಿರಬಹುದು ಎನ್ನುವ ಕೂತೂಹಲ ಇದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್, ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಹೊಸ್ತಿಲಲ್ಲಿರೋ ಕರ್ನಾಟಕಕ್ಕೆ ನವ ಸಂಭ್ರಮ ತರಲಿದೆ. ‘ಬಿಗ್‌ ಬಾಸ್‌’ ಹೊಸ ಸೀಸನ್ ಅಂದ್ಮೇಲೆ ವಿಶೇಷ ಇರಲೇಬೇಕು. ಯಾಕೆ ಅಂದ್ರೆ ಬಿಗ್‌ ಬಾಸ್ ಅಂದ್ರೆನೇ ‘Expect the Unexpected’ ಅಂತ ಹೇಳ್ತಾರೆ “ಬಿಗ್ ಬಾಸ್”!

‘ಬಿಗ್‌ ಬಾಸ್ ಬಗ್ಗೆ ನಮಗೆ ಎಲ್ಲಾ ಗೊತ್ತಿದೆ, ಅಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋ ಅರಿವೂ ನಮಗೆ ಚೆನ್ನಾಗಿ ಇದೆ ಅಂತ ಹೇಳೊರಿಗೆ, ಪ್ರೋಮೊ ಮೂಲಕ “ಓಹ್.. ಭ್ರಮೆ!” ಅಂತ ಕಿಚ್ಚ ಸುದೀಪ್, ಸ್ವೀಟ್‌ ಆಗಿ ಉತ್ತರ ಕೊಟ್ಟಿದಾರೆ. ಈ ಸೀಸನ್‌ನ ಪ್ರೋಮೊಗಳು ಸುದ್ದಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಹತ್ತು ಮಿಲಿಯನ್’ಗೂ ಹೆಚ್ಚು ವ್ಯೂಸ್ ಮಾಡುವ ಮೂಲಕ ಸದ್ದು ಮಾಡಿವೆ. AI ತಂತ್ರಜ್ಞಾನವನ್ನು ಬಳಸಿ ಹೇಳಿರುವ ಕತೆ ಮತ್ತು ಸುದೀಪ್‌ರ ಹೊಸ ಲುಕ್‌ ಹಾಗೂ ಸ್ಟೈಲ್ ಎಲ್ಲೆಡೆ ಹೊಸ ಅಲೆಯನ್ನೇ ಎಬ್ಬಿಸಿದೆ.

ಒಂದು ಕಡೆ ಇಡೀ ಕರ್ನಾಟಕ ಹೊಸ ಸೀಸನ್‌ಗಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ಕಿಚ್ಚ ಅವರನ್ನು ವಿಭಿನ್ನ ಕಾಸ್ಟ್ಯೂಮ್ಸ್‌ಗಳಲ್ಲಿ ನೋಡಲು ಕಾಯ್ತ ಇದಾರೆ. ಮೈ ನವಿರೇಳಿಸೋ ಟಾಸ್ಕ್ಸ್, ಅನಿರೀಕ್ಷಿತ ಎಮೋಷನ್ಸ್ ಹುಟ್ಟುಹಾಕೋ ಸಂದರ್ಭ, ವಾರದಿಂದ ವಾರಕ್ಕೆ ಹೆಚ್ಚಾಗೋ ಟ್ವಿಸ್ಟ್ಸ್ ಆಂಡ್ ಟರ್ನ್ಸ್, ಹೊಸ ಪ್ರಪಂಚವನ್ನೇ ಸೃಷ್ಟಿಸೋಕೆ ಸಜ್ಜುಗೊಳ್ಳುತ್ತಿವೆ.

ಸತತವಾಗಿ 11 ವರ್ಷಗಳ ಕಾಲ ಯಶಸ್ವಿಯಾಗಿ ಒಂದು ರಿಯಾಲಿಟಿ ಶೋ ನಡೆಸಿಕೊಟ್ಟ ಬೆರಳೆಣಿಕೆಯ ದಿಗ್ಗಜರಲ್ಲಿ ಒಬ್ಬರೆನಿಸಿದ ನಮ್ಮ ಕಿಚ್ಚ, ಈ ಸಲವೂ ಬಿಗ್ ಬಾಸ್ ಚುಕ್ಕಾಣಿ ಹಿಡಿದು, ತಮ್ಮ ಐಕಾನಿಕ್ ಧ್ವನಿ, ಮೊನಚು ವ್ಯಕ್ತಿತ್ವ, ನಿಬ್ಬೆರಗಾಗಿಸೋ ವೈಖರಿ, ಕಣ್ಸೆಳೆಯೋ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ, ತಪ್ಪಿದೋರನ್ನ ತಿದ್ದೋ ಗಟ್ಟಿತನ, ಪ್ರತಿ ಬಾರಿ ಅವರು ನೀಡೋ ಸಂದೇಶ ಇವೆಲ್ಲವುದನ್ನೂ ನೋಡೋದಕ್ಕೆ ಪ್ರೇಕ್ಷಕರು ಕಾಯ್ತಿದಾರೆ.

‘ಬಿಗ್‌ ಬಾಸ್’ ಮನೆಯ ಪ್ರತೀ ಕೋನವೂ, ಕೋಣೆಯೂ ಡಿಫರೆಂಟ್ ಇರೋ ಹಾಗೆ, ಮನೆಯ ಸದಸ್ಯರೂ ಈ ಸಲ ಡಿಫರೆಂಟೇ. ಆಕ್ಟರ್ಸ್, ಸಿಂಗರ್ಸ್, ಕಾಮಿಡಿಯನ್ಸ್, ಕುಕ್ಸ್, ಹೀಗೆ ಬೇರೆ ಬೇರೆ ಕ್ಷೇತ್ರದ ಇಂಟರೆಸ್ಟಿಂಗ್ ವ್ಯಕ್ತಿಗಳು, ಒಂದೇ ಕಡೆ ಒಟ್ಟಾಗಿ ರಂಗು ಹೆಚ್ಚಾಗೋದ್ರಲ್ಲಿದೆ.

ಮನೆಯೊಳಗೆ ನಡೆಯುವ ವಿಚಾರಗಳನ್ನು ಪ್ರತಿ ಕ್ಷಣವನ್ನೂ ಜಿಯೋ ಹಾಟ್‌ಸ್ಟಾರ್‍‌ನಲ್ಲಿ 24ಗಂಟೆ ಲೈವ್‌ ಚಾನೆಲ್‌ನಲ್ಲಿ ನೋಡಬಹುದು. ನೋಡುವುದರ ಜೊತೆಗೆ ವೀಕ್ಷಕರಿಗೆ ಆಡುವ ಮಜಾ ನೀಡುವುದಕ್ಕಾಗಿ ‘ಜೀತೋ ಧನ್ ಧನಾ ಧನ್’ ಸ್ಪರ್ಧೆ ಇದೆ. ಎಪಿಸೋಡ್ ಪ್ರಸಾರವಾಗುವ ವೇಳೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಯಾನ್‌ ಝೋನ್‌ನಲ್ಲಿ ಸಕ್ರಿಯರಾಗಿದ್ದರೆ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು. ಈ ಬಾರಿಯೂ ನಿಮ್ಮಿಷ್ಟದ ಸ್ಪರ್ಧಿಗಳನ್ನು ಉಳಿಸುವುದಕ್ಕಾಗಿ ವೋಟ್ ಮಾಡಲು ಜಿಯೋ ಹಾಟ್‌ಸ್ಟಾರ್‌ ಆಪ್‌ನಲ್ಲಿ ಮಾತ್ರ ಅವಕಾಶ ಸಿಗಲಿದೆ.

 

Related Posts

Leave a Reply

Your email address will not be published. Required fields are marked *