ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 26 (ಶುಕ್ರವಾರ) ಮತ್ತು 27 (ಶನಿವಾರ) ದಿನಗಳಲ್ಲಿ BESCOM ತುರ್ತು ಕಾರ್ಯಾಚರಣೆಯಿಂದಾಗಿ ಈ ಕೆಳಗಿನ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ವಾಗಲಿದೆ.
ವಿದ್ಯುತ್ ವ್ಯತ್ಯಯ ಸಮಯ ಮತ್ತು ಉಪಕೇಂದ್ರಗಳು ಇಸ್ಕಾನ್ ಉಪಕೇಂದ್ರ ವ್ಯಾಪ್ತಿಯಲ್ಲಿ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ವಿದ್ಯುತ್ ಪೂರೈಕಿ ವ್ಯತ್ಯಯ ಆಗಲಿದೆ.
ಆರ್.ಎಂ.ವಿ ಉಪಕೇಂದ್ರ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸಹ ಸಮಾನ ಸಮಯದಲ್ಲಿ (10:00–17:00) ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ.
ಮಂತ್ರಿ ಅಪಾರ್ಟ್‌ಮೆಂಟ್, ತಲಘಟ್ಟಪುರ, ರಘುವನಹಳ್ಳ, ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ವಿ.ವಿ. ಲೇಔಟ್, ಬಾಲಾಜಿ ಲೇಔಟ್, ರಾಯಲ್ ಫಾರಂ ಇತ್ಯಾದಿ ಕ್ಷೇತ್ರಗಳು ಈ ವಿದ್ಯುತ್ ವ್ಯತ್ಯಯ ಪಟ್ಟಿಯಲ್ಲಿವೆ.
ಶನಿವಾರದಂದು ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, MSR ನಗರ, BE L ರೋಡ್, AGS ಲೇಔಟ್, ಜಲದರ್ಶಿನಿ ಲೇಔಟ್, ಶ್ರೀನಿಕೇತ್ ಅಪಾರ್ಟ್‌ಮೆಂಟ್, ಚಿಕ್ಕಮಾರನಹಳ್ಳಿ, ಇಸ್ರೋ ಸುತ್ತಮುತ್ತ ಪ್ರದೇಶಗಳು ಸಹ ಸಾಮಾನ್ಯವಾಗಿ ವಿದ್ಯುತ್ ತೊಂದರೆಯಾಗಬಹುದು ಎಂದು BESCOM ತಿಳಿಸಿದೆ.
BESCOM ವಿನಂತಿ
BESCOM ಸಾರ್ವಜನಿಕರಿಗೆ ವಿನಂತಿಸಿದೆ — ಈ ದಿನಗಳಲ್ಲಿ ತಮ್ಮ ವಿದ್ಯುತ್ ಬಳಕೆ ನಿರ್ವಹಣೆ ಮಾಡಿ, ಅಗತ್ಯವಿದ್ದರೆ ಬ್ಯಾಟರಿ ಅಥವಾ ಇನ್ವೆರ್ಸರ್ ಮುಂತಾದ ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳಿ.