Menu

Kamal Hassan: ಕರ್ನಾಟಕದಲ್ಲಿ “ಥಗ್ ಆಫ್ ಲೈಫ್” ಬಿಡುಗಡೆಗೆ ತಡೆ ಸರಿಯಲ್ಲವೆಂದ ಸುಪ್ರೀಂ

kamal hassan

ಕಮಲ್ ಹಾಸನ್ ನಟನೆಯ ಥಗ್ ಆಫ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಕನ್ನಡ ಭಾಷೆ ಕುರಿತು ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿ,  ಸಂವಿಧಾನದತ್ತವಾಗಿ ಮಾತನಾಡುವ ಮೂಲಭೂತ ಹಕ್ಕು ಪ್ರತಿಯೊಬ್ಬರು ಹೊಂದಿದ್ದು, ಸಿನಿಮಾ ಬಿಡುಗಡೆಗೆ ತಡೆಯೊಡ್ಡುವುದು ಸರಿಯಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಕರ್ನಾಟಕದಲ್ಲಿ ಅಘೋಷಿತ ನಿಷೇಧಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ  ಸೂಚಿಸಿತ್ತು.

ಇದೇ ಅರ್ಜಿಗೆ ಸಂಬಂಧಿಸಿದಂತೆಈ ಹಿಂದೆ  ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆದಾಗ ಪ್ರಕರಣವನ್ನು ರಾಜ್ಯ ಹೈಕೋರ್ಟ್​​ನಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿತ್ತು, ಆದರೆ ಕಮಲ್ ಪರ ವಕೀಲರು, ಯಾರು ಸಿನಿಮಾದ ಬಿಡುಗಡೆಗೆ ತಡೆ ಒಡ್ಡುತ್ತಿದ್ದಾರೆಯೋ ಅವರೊಟ್ಟಿಗೆ ಸಂಧಾನ ಮಾಡಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ ಎಂದು ಉತ್ತರಿಸಿದ್ದರು. ಈ ಕಾರಣಕ್ಕೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿತ್ತು.

‘ಥಗ್ ಲೈಫ್’ ಸಿನಿಮಾ ಪರವಾಗಿ ವಕೀಲ ನವಪ್ರೀತ್ ಕೌರ್, ಸಿಬಿಎಫ್​ಸಿ ಪ್ರಮಾಣ ಪತ್ರ ಪಡೆದಿರುವ ತಮಿಳು ಚಿತ್ರ “ಥಗ್ ಲೈಫ್”ಗೆ ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಅನಧಿಕೃತವಾಗಿ ನಿಷೇಧ ಹೇರಲಾಗಿದೆ. ಹಿಂಸಾಚಾರದ ಬೆದರಿಕೆಯಡಿ ನಿಷೇಧವನ್ನು ಜಾರಿ ಮಾಡಿದ್ದು, ಕಾನೂನು ಪ್ರಕ್ರಿಯೆಯಿಂದ ನಿಷೇಧವನ್ನು ಹೇರಲಾಗಿಲ್ಲ, ಸಿನಿಮಾ ಮಂದಿರಗಳಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದೆ. ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊಂಡು ಹಿಂಸಾಚಾರದ ಪ್ರಚೋದನೆ ಮಾಡಲಾಗಿದೆ ಎಂದು ವಾದಿಸಿದ್ದರು.

ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು  ಅನುಮತಿ ನೀಡಿದೆ.

Related Posts

Leave a Reply

Your email address will not be published. Required fields are marked *