ದಾವಣಗೆರೆ ನಗರದ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಐ ಲವ್ ಮಹಮ್ಮದೀಯ ಫ್ಲೆಕ್ಸ್ ಹಾಕಿದ್ದಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ.
ಕಾರ್ಲ್ ಮಾರ್ಕ್ಸ್ ನಗರದ 13ನೇ ಕ್ರಾಸ್ ನಲ್ಲಿ ಅನ್ಯ ಕೋಮಿನ ಮನೆ ಮುಂದೆ ಐ ಲವ್ ಮಹಮ್ಮದೀಯ ಫ್ಲೆಕ್ಸ್ ಸೇರಿದಂತೆ ಬೇರೆ ಫ್ಲೆಕ್ಸ್ ಹಾಕಿದ್ದಕ್ಕೆ ಆಕ್ಷೇಪಿಸಿ, ನಮ್ಮ ಮನೆಯ ಮುಂಭಾಗ ಫ್ಲೆಕ್ಸ್ ಹಾಕಬೇಡಿ ಎಂದು ಹೇಳಿದ್ದಕ್ಕೆ ಗಲಾಟೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಜಾದ್ ನಗರ ಪೊಲೀಸರು ಮಾತನಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಕೆವುಲ ಕಿಡಿಗೇಡಿಗಳು ಒಂದು ಧರ್ಮದ ಮನೆಯನ್ನೇ ಟಾರ್ಗೆಟ್ ಮಾಡಿ ಕಲ್ಲು ಹೊಡೆದಿದ್ದಾರೆ ಎಂದು ಆರೋಪವೂ ಕೇಳಿ ಬಂದಿದೆ. ಸ್ಥಳಕ್ಕೆ ಐಜಿಪಿ ರವಿಕಮತೇಗೌಡ, ಎಸ್ ಪಿ ಉಮಾ ಪ್ರಶಾಂತ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
‘ಐ ಲವ್ ಮುಹಮ್ಮದ್’, ‘ಐ ಲವ್ ಮಹಾದೇವ್ ಪೋಸ್ಟ್ ವಾರ್
ಗುಜರಾತ್ ರಾಜ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್ ಹಿಂಸಾಚಾರಕ್ಕೆ ಕಾರಣವಾಗಿ ಪ್ರಕರಣ ಸಂಬಂಧ ಈ ವರೆಗೂ 60 ಮಂದಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಐ ಲವ್ ಮುಹಮ್ಮದ್’ ಎಂಬ ಪೋಸ್ಟ್‌ಗೆ ಹಿಂದೂ ವ್ಯಕ್ತಿಯೊಬ್ಬ ‘ಐ ಲವ್ ಮಹಾದೇವ್’ ಎಂದು ಪೋಸ್ಟ್ ಹಂಚಿಕೊಂಡಿರುವುದು ಗಲಭೆಗೆ ಕಾರಣವಾಗಿದೆ.
http://ಗೋಧ್ರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ: 25 ಮಂದಿಯ ಬಂಧನ
ಹಿಂದೂ ವ್ಯಕ್ತಿ ಹಂಚಿಕೊಂಡ ಪೋಸ್ಟ್‌ನಿಂದಾಗಿ ಆಕ್ರೋಶಗೊಂಡ ಮುಸ್ಲಿಂ ಸಮುದಾಯದ ಗುಂಪು ಗಾಂಧಿನಗರ ಜಿಲ್ಲೆಯ ಬಹಿಯಾಲ್ ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಿದ್ದು, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಿ ಗಲಭೆ ನಡೆಸಿದೆ.
ಪೋಸ್ಟ್ ಹಂಚಿಕೊಂಡ ಹಿಂದೂ ವ್ಯಕ್ತಿಯ ಅಂಗಡಿಗೆ ನುಗ್ಗಿದ ಕಿಡಿಗೇಡಿಗಳು ವಸ್ತುಗಳನ್ನು ಹೊರಗೆಸೆದು ಬೆಂಕಿ ಹಚ್ಚಿದ್ದಾರೆ. ಹಿಂದೂಗಳಿರುವ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಬಹಿಯಾಲ್ ಗ್ರಾಮದಿಂದ 60 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.