ಟೆಹ್ರಾನ್: ಇರಾನ್ ನ ಎರಡು ಯುದ್ಧ ವಿಮಾನಗಳನ್ನು ಇಸ್ರೇಲ್ ಹೊಡೆದುರುಳಿಸಿದೆ. ಈ ಮೂಲಕ ಎರಡೂ ದೇಶಗಳ ನಡುವಣ ಯುದ್ಧ 5ನೇ ದಿನಕ್ಕೆ ಕಾಲಿಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಟೆಹ್ರಾನ್ ವಿಮಾನ ನಿಲ್ದಾಣದಲ್ಲಿದ್ದ ಅಮೆರಿಕಾ ನಿರ್ಮಿತ ಎಫ್-14 ಯುದ್ಧ ವಿಮಾನಗಳು ಇಸ್ರೇಲ್ ದಾಳಿಗೆ ಛಿದ್ರ ಛಿದ್ರವಾಗಿದೆ. ಅಲ್ಲದೇ ಡ್ರೋನ್ಗಳನ್ನು ಹಾರಿಸಲು ಸಜ್ಜಾಗಿದ್ದ ಇರಾನಿನ ಸೈನಿಕರ ಮೇಲೆ ಇಸ್ರೇಲ್ ದಾಳಿ ಮಾಡಿದೆ.
ಇರಾನ್ ರಾಷ್ಟ್ರದ ಮೇಲೆ ಇಸ್ರೇಲ್ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದು, ಟೆಹ್ರಾನ್ ವಾಯುಪ್ರದೇಶವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಇರಾನ್ನ 100 ಸ್ಥಳಗಳನ್ನ ಗುರಿಯಾಗಿಸಿ ಇಸ್ರೇಲ್ ಏರ್ಸ್ಟ್ರೈಕ್ ಮಾಡಿದ್ದು, ಈಗಾಗಲೇ ಇಸ್ರೇಲ್ 120ಕ್ಕೂ ಹೆಚ್ಚು ಇರಾನ್ ಮಿಸೈಲ್ಗಳನ್ನು ನಾಶಪಡಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್ನ ಐರನ್ ಡೋಮ್, ಥಾಡ್ ಏರ್ ಡಿಫೆನ್ಸ್ ಸಿಸ್ಟಂ ಆಕ್ಟೀವ್ ಆಗಿವೆ. ಇರಾನ್ನ ವಿಶ್ವದ ಅತಿದೊಡ್ಡ ಅನಿಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಈವರೆಗೆ 200ಕ್ಕೂ ಹೆಚ್ಚು ಇರಾನ್ ನಾಗರಿಕರು ಬಲಿಯಾಗಿದ್ದಾರೆ.