Menu

ಕುಡಿದು ಶಾಲಾ ವಾಹನ ಓಡಿಸುತ್ತಿರುವ ಚಾಲಕರು ಪೊಲೀಸ್‌ ವಶಕ್ಕೆ

ಬೆಂಗಳೂರಿನಲ್ಲಿ ಶಾಲಾ ವಾಹನ ಚಾಲಕರ ಕಾರ್ಯವೈಖರಿ ತಪಾಸಣೆಗಾಗಿ ಬೆಂಗಳೂರು ಸಂಚಾರಿ ಪೊಲೀಸರ ಸ್ಪೆಷಲ್ ಡ್ರೈವ್ ಆರಂಭಿಸಿದ್ದು, ಕುಡಿದು ಶಾಲಾ ವಾಹನ ಓಡಿಸುತ್ತಿರುವ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.

ರಜೆ ಮುಗಿದು ಶಾಲೆಗಳು ಶುರುವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಚಾಲಕರ ತಪಾಸಣೆ ಕೈಗೊಂಡಿರುವ ಸಂಚಾರಿ ಪೊಲೀಸರಿಗೆ ಶಾಕ್‌ ಆಗುವಂತೆ ಬೆಳಗ್ಗೆಯೇ ಕುಡಿದು ವಾಃನ ಚಲಾಯಿಸುವ ಚಾಲಕರು ಸಿಕ್ಕಿ ಬಿದ್ದಿದ್ದಾರೆ.

ಚಾಲಕ ಕಂಠ ಪೂರ್ತಿ ಕುಡಿದು ವಾಹನ ಚಲಾಯಿಸ್ತಿರುವ ಪ್ರಕರಣ ಆರ್ ಆರ್ ನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ, ಇತರ ಕೆಲವು ಕಡೆ ಅಂತದ್ದೇ ಪ್ರಕರಣಗಳು ಕಂಡು ಬಂದಿದ್ದು, ಅಂಥ ಚಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂದು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಖಾಸಗಿ ಕಾಲೇಜು ಮಂಡಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *