Menu

ಭಾರತೀಯ ಶುಭಾಂಶು ಶುಕ್ಲ ಬಾಹ್ಯಕಾಶ ಯಾನಕ್ಕೆ ಮುಹೂರ್ತ ಫಿಕ್ಸ್

isro

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ನಡೆಸಲಿರುವ ಅಂತರೀಕ್ಷಾ ಯಾನ ಸತತ ಎರಡು ಬಾರಿ ಮುಂದೂಡಿಕೆ ನಂತರ ಇದೀಗ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಕೊನೆಗೂ ದಿನಾಂಕ ನಿಗದಿಪಡಿಸಿದೆ.

ಅಮೆರಿಕದ ಫ್ಲೋರಿಡಾದ ಬಾಹ್ಯಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳನ್ನೊಳಗೊಂಡ ಆಕ್ಸಿಯಮ್-4 ರಾಕೆಟ್ ಜೂನ್ 19ರಂದು ಉಡಾವಣೆ ಆಗಲಿದೆ ಎಂದು ಶುಕ್ರವಾರ ಇಸ್ರೊ ಅಧಿಕೃತವಾಗಿ ಘೋಷಣೆ ಮಾಡಿದೆ.

ಇಸ್ರೊ, ಆಕ್ಸಿಮ್ ಸ್ಪೇಸ್ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಗಳ ಜೊತೆ ನಡೆದ ಮಾತುಕತೆ ನಂತರ ಬಾಹ್ಯಕಾಶ ಯಾನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

ಭಾರತೀಯ ನೌಕಾಪಡೆಯ ಯೋಧ ಶುಭಾಂಶು ಶುಕ್ಲ ಬಾಹ್ಯಕಾಶ ಯಾನ ನಡೆಸಲಿರುವ 2ನೇ ಭಾರತೀಯ ಆಗಿದ್ದಾರೆ. 41 ವರ್ಷಗಳ ಹಿಂದೆ 1984ರಲ್ಲಿ ರಷ್ಯಾದ ಸೂಯೆಜ್ ನೌಕೆಯಲ್ಲಿ ರಾಕೇಶ್ ಶರ್ಮ ಬಾಹ್ಯಕಾಶ ಯಾನ ಮಾಡಿ ಇತಿಹಾಸ ನಿರ್ಮಿಸಿದ್ದರು.

ಹವಾಮಾನ ವೈಪರಿತ್ಯ ಮತ್ತು ಆಕ್ಸಿಜನ್ ಕೊರತೆ ಸೇರಿದಂತೆ ನಾನಾ ಕಾರಣಗಳಿಗಾಗಿ ಈ ಹಿಂದೆ ಎರಡು ಬಾರಿ ನಿಗದಿಯಾಗಿದ್ದ ಬಾಹ್ಯಕಾಶ ಯಾನವನ್ನು ಮುಂದೂಡಲಾಗಿತ್ತು.

ಶುಭಾಂಶು ಶುಕ್ಲ ಬಾಹ್ಯಕಾಶ ಯಾನದಲ್ಲಿ ಭಾರತ ಹಮ್ಮಿಕೊಂಡಿರುವ 7 ಸಂಶೋಧನೆಗಳನ್ನು ನಡೆಸಲಿದ್ದಾರೆ.

Related Posts

Leave a Reply

Your email address will not be published. Required fields are marked *