Menu

ಬೆಂಗಳೂರಿನಲ್ಲಿ ಖೋಟಾ ನೋಟು ಪ್ರಿಂಟ್ ಮಾಡಿ ಸಿಕ್ಕಿಬಿದ್ದ ಉದ್ಯಮಿ ಪುತ್ರ

ಬೆಂಗಳೂರು:  ಮನೆಯಲ್ಲಿ ಖರ್ಚಿಗೆ ಹಣ ಕೊಡದ ಕಾರಣ ಟೆಕ್ಸ್​​ಟೈಲ್ಸ್​ ಉದ್ಯಮಿ ಪುತ್ರ ಖೋಟಾ ನೋಟು ಪ್ರಿಂಟ್ ಮಾಡಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಕಲಿ ನೋಟು ಪ್ರಿಂಟ್ ಮಾಡಿದ್ದ ಉದ್ಯಮಿ ಪುತ್ರ ಕ್ರಿಷ್ ಮಾಲಿ (23) ಎಂಬಾತನನ್ನು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

ಕ್ರಿಷ್ ಮಾಲಿ ಖೋಟಾ ನೋಟು ಪ್ರಿಂಟ್ ಮಾಡಲು ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ. ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನ ತಂದಿದ್ದ ಈತ ಹೋಟೆಲ್‌ನಲ್ಲಿ ಕುಳಿತೇ 500 ರೂಪಾಯಿ ಮುಖಬೆಲೆಯ ನಕಲಿ ನೋಟು ಪ್ರಿಂಟ್ ಮಾಡಿದ್ದಾನೆ.

ಆನ್ ಲೈನ್ ನಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ದ ಕ್ರಿಷ್, ಚೆಕ್ ಔಟ್ ಮಾಡುವಾಗ 500 ರೂ. ಮುಖಬೆಲೆಯ ನೋಟುಗಳನ್ನು ನೀಡಿದ್ದಾನೆ. ಆದರೆ ರೂಮ್ ಕ್ಲೀನ್ ಮಾಡಲು ಹೋದ ರೂಮ್ ಬಾಯ್ ಕಸದ ಬುಟ್ಟಿಯಲ್ಲಿ ನಕಲಿ ನೋಟುಗಳನ್ನು ನೋಡಿ ಮ್ಯಾನೇಜರ್ ಗಮನಕ್ಕೆ ತಂದಾಗ ತಾವು ಮೋಸ ಹೋಗಿರುವುದು ಪತ್ತೆಯಾಗಿದೆ.

ಮನೆಯಲ್ಲಿ ಖರ್ಚಿಗೆ ಹಣ ಕೊಡದ ಕಾರಣಕ್ಕೆ ಜಗಳವಾಡಿಕೊಂಡಿದ್ದ ಕ್ರಿಷ್, ತಾನೇ ಖೋಟ ನೋಟ್ ಪ್ರಿಂಟ್ ಮಾಡುವ ಪ್ಲಾನ್ ಹಾಕಿದ್ದ. ಜೂನ್ 1 ರಂದು ರೂಮ್ ಬುಕ್ ಮಾಡಿಕೊಂಡು 3 ದಿನ ಅಲ್ಲೇ ತಂಗಿದ್ದು, ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿ ಮಾಡಿದ್ದಾನೆ.

ರೂಂ ಕ್ಲೀನ್ ಮಾಡುವಾಗ ಆತನ ರೂಂ ಡೆಸ್ಟ್ ಬಿನ್ ನಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿದ್ದು, ಕೂಡಲೇ ರೂಮ್ ಬಾಯ್​ ಹೋಟೆಲ್ ಮ್ಯಾನೇಜರ್ ಗೆ ಈ ವಿಚಾರ ತಿಳಿಸಿದ್ದಾನೆ. ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ಕ್ರಿಷ್ ಮಾಲಿ ನೀಡಿದ್ದ ಹಣವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ನೋಟು ಎನ್ನುವುದು ಗೊತ್ತಾಗಿದೆ.

ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲನೆ ಮಾಡಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟಿನ ಚೂರುಗಳು ಪತ್ತೆಯಾಗಿವೆ. ಬಳಿಕ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ .ಕ್ರಿಷ್ ಮಾಲಿನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Posts

Leave a Reply

Your email address will not be published. Required fields are marked *