ಭಾರತೀಯ ಸಿನಿರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನವದೆಹಲಿಯಲ್ಲಿ ನೆರವೇರಿತು. 2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳು, ಕಲಾವಿದರು, ನಿರ್ದೇಶಕರು ಹಾಗೂ ತಾಂತ್ರಿಕ ತಜ್ಞರನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ, 2023ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ನೀಡಿ ಗೌರವಿಸಲಾಯಿತು.
ಜವಾನ್ ಚಿತ್ರಕ್ಕಾಗಿ ಶಾರುಖ್ ಖಾನ್ ಹಾಗೂ ಹಾಗೂ ಮಿಸೆಸ್ ಚಟರ್ಜಿ vs ನಾರ್ವೆ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು.
71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದವರ ಪಟ್ಟಿ
- ಅತ್ಯುತ್ತಮ ನಟ – ಶಾರುಖ್ ಖಾನ್ (ಜವಾನ್) ಮತ್ತು ವಿಕ್ರಾಂತ್ ಮಾಸಿ (12th ಫೇಲ್)
- ಅತ್ಯುತ್ತಮ ನಟಿ – ರಾಣಿ ಮುಖರ್ಜಿ (Mrs ಚಟರ್ಜಿ vs ನಾರ್ವೆ)
- ಅತ್ಯುತ್ತಮ ಹಿಂದಿ ಚಿತ್ರ- ಕಥಲ್
- ಅತ್ಯುತ್ತಮ ಫೀಚರ್ ಫಿಲ್ಮ್: ‘12th ಫೇಲ್’
- ಅತ್ಯುತ್ತಮ ಕನ್ನಡ ಚಿತ್ರ – ‘ದಿ ರೇ ಆಫ್ ಹೋಪ್’
- ಅತ್ಯುತ್ತಮ ಗಾಯಕಿ- ಶಿಲ್ಪಾ ರಾವ್ (ಜವಾನ್ ಕೆ ಚಲೇಯಾ)
- ಅತ್ಯುತ್ತಮ ಗಾಯಕ – ಪಿವಿಎನ್ಎಸ್ ರೋಹಿತ್ (ಬೇಬಿ, ತೆಲುಗು)
- ಅತ್ಯುತ್ತಮ ಛಾಯಾಗ್ರಹಣ – ದಿ ಕೇರಳ ಸ್ಟೋರಿ
- ಅತ್ಯುತ್ತಮ ನೃತ್ಯ ಸಂಯೋಜನೆ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ದಿಂಡೋರಾ ಬಜೆ ರೇ)
- ಅತ್ಯುತ್ತಮ ಮೇಕಪ್ ಮತ್ತು ಕಾಸ್ಟ್ಯೂಮ್ ಡಿಸೈನರ್ – ಸ್ಯಾಮ್ ಬಹದ್ದೂರ್
- ವಿಶೇಷ ಉಲ್ಲೇಖ: ಅನಿಮಲ್ (ರೀ-ರೆಕಾರ್ಡಿಂಗ್ ಮಿಕ್ಸರ್) ಎಂ.ಆರ್.ರಾಜಕೃಷ್ಣನ್
- ಅತ್ಯುತ್ತಮ ಧ್ವನಿ ವಿನ್ಯಾಸ – ಅನಿಮಲ್ (ಹಿಂದಿ)
- ಅತ್ಯುತ್ತಮ ನಿರ್ದೇಶನ – ಕೇರಳ ಸ್ಟೋರಿ (ಸುದೀಪ್ತೋ ಸೇನ್)
- ಅತ್ಯುತ್ತಮ ಜನಪ್ರಿಯ ಚಿತ್ರ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
- ಅತ್ಯುತ್ತಮ ತೆಲುಗು ಚಿತ್ರ – ಭಗವಂತ ಕೇಸರಿ
- ಅತ್ಯುತ್ತಮ ಗುಜರಾತಿ ಚಿತ್ರ – ವಾಶ್
- ಅತ್ಯುತ್ತಮ ತಮಿಳು ಚಲನಚಿತ್ರ – ಪಾರ್ಕಿಂಗ್