ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಕೋರಮಂಗಲ ಮತ್ತು ಹಲಸುರ್‌ಗೇಟ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಕೋರಮಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲೂಯಿ ರಾಮ ರೆಡ್ಡಿ ಮತ್ತು ಹಲಸುರ್‌ಗೇಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಭಜಂತ್ರಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಚಿನ್ನದ ಉದ್ಯಮಿಯಿಂದ 10 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಅಮಾನತು ಆದೇಶ ಮಾಡಲಾಗಿದೆ. ಹಲಸೂರು ಇನ್ಸ್ಪೆಕ್ಟೆರ್ ಭಜಂತ್ರಿ ಹತ್ತು ಲಕ್ಷ ಹಣವನ್ನು ಚಿನ್ನದ ವ್ಯಾಪಾರಿ ಯಿಂದ ಅಕ್ರಮವಾಗಿ ಪಡೆದ ಆರೋಪವಿದೆ.
ಕೆಲವು ದಿನಗಳ ಹಿಂದೆ ನಗರ ಪೊಲೀಸ್ ಆಯುಕ್ತರು ನೈಟ್ ರೌಂಟ್ಸ್ ನಲ್ಲಿದ್ದ ಸಂದರ್ಭದಲ್ಲಿ ರಾತ್ರಿ ಪಬ್ ಮತ್ತು ಬಾರ್ ಗಳಿಗೆ ಹೆಚ್ಚುವರಿ ಸಮಯ ಅವಕಾಶ ನೀಡಿದ್ದಕ್ಕಾಗಿ ಕೋರಮಂಗಲ ಇನ್ಸ್ಪೆಕ್ಟರ್ ಲೂಯಿ ರಾಮ ರೆಡ್ಡಿಯನ್ನು ಸಸ್ಪೆಂಡ್ ಮಾಡಲಾಗಿದೆ.