ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಕಾಂತಾರ’ ಚಾಪ್ಟರ್ ೧ ಜನರಿಂದ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಹೊಸದಾದಾ ಪ್ರಮೋಷನ್ ದಾರಿ ನೀಡಿದ ಚಿತ್ರ ತಂಡಕ್ಕೆ ಭರ್ಜಿರಿ ಸ್ವಾಗತ ಸಿಕ್ಕಿದೆ.
ಬಿಡುಗಡೆಯಾಗಿ ಕೇವಲ ಕೆಲವು ಗಂಟೆಗಳಲ್ಲೇ ಮಿಲಿಯನ್ಸ್ ವೀಕ್ಷಣೆ ಗಳಿಸಿದೆ. ಅಭಿಮಾನಿಗಳು ಹಾಗೂ ಚಲನಚಿತ್ರ ಪ್ರೇಮಿಗಳು ಭರ್ಜರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಗ್ರಾಮೀಣ ಸೊಗಡು – ರೋಮಾಂಚಕ ದೃಶ್ಯಾವಳಿ
‘ಕಾಂತಾರ’ ಟ್ರೈಲರ್‌ನಲ್ಲಿ ತೋರಿಸಿರುವ ಗ್ರಾಮೀಣ ಹಿನ್ನೆಲೆ, ಕಾಡು-ಕುಡ್ರೆ-ಬೂತಕೋಲದ ಸಂಸ್ಕೃತಿ, ತೀವ್ರ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರಲ್ಲಿ ಕೌತುಕ ಮೂಡಿಸಿದರೆ, ಚಿತ್ರದ ಭಾವನಾತ್ಮಕ ಹಾಗೂ ಉಗ್ರ ಹೋರಾಟದ ದೃಶ್ಯಾವಳಿ ಟ್ರೈಲರ್‌ಗೆ ವಿಶಿಷ್ಟ ಮೆರುಗು ನೀಡಿವೆ.
ಅಭಿಮಾನಿಗಳ ಪ್ರತಿಕ್ರಿಯೆ
ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೈಲರ್ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು “ಇದು ಸ್ಯಾಂಡಲ್‌ವುಡ್‌ಗೆ ದಂತಕತೆಯಾಗಿದೆ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ಪ್ರಕೃತಿ ಮತ್ತು ಸಂಸ್ಕೃತಿಯ ಮಿಶ್ರಣ ಚೆನ್ನಾಗಿದೆ” ಎಂಬ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದನ್ನು “ಗೋಸ್‌ಬಂಪ್ಸ್ ಟ್ರೈಲರ್” ಎಂದು ಕೊಂಡಾಡಿದ್ದಾರೆ.
ಬಾಕ್ಸ್‌ಆಫೀಸ್ ನಿರೀಕ್ಷೆ
ಹೀಗಾಗಲೇ ಚಿತ್ರದ ಒಟಿಟಿ ಪ್ರತಿ ಬಹು ಬೇಡಿಕೆಯಲ್ಲಿ ಮಾರಾಟವಾಗಿದ್ದು, ಟ್ರೈಲರ್‌ಗೆ ದೊರೆಯುತ್ತಿರುವ ಪ್ರತಿಕ್ರಿಯೆ ನೋಡುವುದರಿಂದಲೇ ಸಿನಿಮಾ ಬಿಡುಗಡೆಯಾಗುವ ದಿನ ರಾಜ್ಯದೆಲ್ಲೆಡೆ ಹೌಸ್‌ಫುಲ್ ಬೋರ್ಡ್ ಹಾಕುವುದು ಖಚಿತ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.