ಹುಬ್ಬಳ್ಳಿ- ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾದಾಮಿ ತಾಲೂಕಿನ ಹೂಲಗೇರಿ ಬಳಿ ಕ್ಯಾಂಟರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಹುಲ್ಲಿಕೇರಿ ಗ್ರಾಮದ ಇಬ್ಬರು, ನಂದಿಕೇಶ್ವರದ ಓರ್ವ ಸಾವನ್ನಪ್ಪಿರುವುದು. ಇಬ್ಬರು ಟ್ರ್ಯಾಕ್ಟರ್ ನಲ್ಲಿದ್ದರು. ಇನ್ನೊಬ್ಬ ಕ್ಯಂಟರ್ ನಲ್ಲಿದ್ದ.
ವೆಂಕಪ್ಪ ತೋಗುಣಸಿ(೫೫), ಗದ್ದೆಪ್ಪ ಹೊಸಮನಿ(೫೪), ಸಂಜೀವ್(೩೨) ಮೃತಪಟ್ಟವರು. ವೆಂಕಪ್ಪ ,ಗದ್ದೆಪ್ಪ ಇನಾಮ್ ಹುಲ್ಲಿಕೇರಿ ನಿವಾಸಿಗಳಾಗಿದ್ದರೆ, ಸಂಜೀವ್ ನಂದಿಕೇಶ್ವರ ಗ್ರಾಮದ ನಿವಾಸಿ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, , ಕೆರೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆರೂರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾವಗಡದಲ್ಲಿ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
ಪಾವಗಡ ತಾಲೂಕಿನ ಕಡಪನಕೆರೆಯಲ್ಲಿ ಇಬ್ಬರು ಮಕ್ಕಳನ್ನು ಕೊಂದ ತಾಯಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಿತಾ ಆತ್ಮಹತ್ಯೆ ಮಾಡಿಕೊಂಡವರು. 4 ವರ್ಷದ ಮಗ ಕೌಶಿಕ್ ಹಾಗೂ 2 ವರ್ಷದ ಮಗು ಯುಕ್ತಿಯನ್ನು ಕೊಲೆ ಮಾಡಿದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸರಿತಾ ಮಕ್ಕಳ ಹತ್ಯೆಗೈದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡಪನಕೆರೆಯ ಸರಿತಾ ತನ್ನದೇ ಊರಿನ ಆಟೋ ಚಾಲಕ ಸಂತೋಷ್ ಜೊತೆ 6 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಮದುವೆಯಾದಾಗಿನಿಂದ ಪತಿ ಹಾಗೂ ಕುಟುಂಬ ಸರಿತಾಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಪಾವಗಡ ಪೊಲೀಸರು ತನಿಖೆ ನಡೆಸಿದ ನಂತರ ಸಾವಿನ ಹಿಂದಿನ ನಿಜವಾದ ಕಾರಣ ತಿಳಿಯಲಿದೆ.