ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಪ್ರಕರಣದ ವಿಚಾರಣೆಗೆ ಆಗಮಿಸಿದ್ದ ವ್ಯಕ್ತಿ ಕೋರ್ಟ್ ಹಾಲ್ ಒಳಗೆ ಬರುತ್ತಿದ್ದಂತೆಯೇ ಪತ್ನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣೆಗೆರ ನಿವಾಸಿ ಪದ್ಮಾವತಿ ಚಾಕು ಇರಿತಕ್ಕೆ ಒಳಗಾದವರು, ಪತಿ ಪ್ರವೀಣ್ ಚಾಕು ಇರಿದ ಆರೋಪಿ.
ಪತಿ ಹಾಗೂ ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಇಬ್ಬರೂ ವಿಚಾರಣೆಗೆ ಕೋರ್ಟ್‌ಗೆ ಆಗಮಿಸಿದ್ದಾರೆ. ಪದ್ಮಾವತಿ ಪತಿಯಂದ ದೂರವಾಗಿ ತಾಯಿ ಮನೆಯಲ್ಲಿದ್ದರು. ವಿಚಾರಣೆಗೆ ಪ್ರವೀಣ್ ಕುಮಾರ್ ಹಾಗೂ ಪದ್ಮಾವತಿ ಆಗಮಿಸಿದ್ದರು.
ಪ್ರವೀಣ್ ಕುಮಾರ್ ಚಾಕು ತೆಗೆದುಕೊಂಡು ಕೋರ್ಟ್ ಹಾಲ್‌ಗೆ ಬಂದಿದ್ದವ ಕೋರ್ಟ್ ಹಾಲ್ ಪ್ರವೇಶಿಸಿದ ತಕ್ಷಣ ಪದ್ಮಾವತಿ ಮೇಲೆ ದಾಳಿ ಮಾಡಿ ಹಲವು ಬಾರಿ ಇರಿದಿದ್ದಾನೆ. ದಾಳಿ ಮಾಡುತ್ತಿದ್ದಂತೆ ಪೊಲೀಸರು ಸೇರಿದಂತೆ ಇತರ ಸಿಬ್ಬಂದಿ ಹಿಡಿದಿದ್ದು, ಪೊಲೀಸರು ಚಾಕು ಕಸಿದುಕೊಂಡಿದ್ದಾರೆ. ಪ್ರವೀಣ್ ಕುಮಾರ್‌ನನ್ನು ವಶಕ್ಕೆ ಪಡೆದ ಪೊಲೀಸರು ಪದ್ಮಾವತಿಯನ್ನು ಪೊಲೀಸರು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿ ಮಾಡುವಾಗ ಪ್ರವೀಣ್ ಕುಮಾರ್ ಕೈಗೂ ಗಾಯವಾಗಿದೆ. ಪದ್ಮಾವತಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಕು ಪ್ರವೀಣ್ ಕುಮಾರ್ ಕೈಗೆ ತಾಗಿದೆ. ಪೊಲೀಸರು ಪ್ರವೀಣ್ ಕುಮಾರ್‌ನಿಂದ ಚಾಕು ವಶಕ್ಕೆ ಪಡೆಯುವಾಗಲೂ ಗಾಯವಾಗಿದೆ. ಪ್ರವೀಣ್ ಕುಮಾರ್‌ನನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಾಗಿದೆ. ದಾವಣೆಗೆರೆ ಬಡಾವಣೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.