Menu

ಬೆಂಗಳೂರು ಪಿಜಿಗಳಿಗೆ 3 ಸಾವಿರ ರೂ. ಇದ್ದ ನೀರಿನ ಬಿಲ್‌ 20 ಸಾವಿರಕ್ಕೆ ಏರಿಕೆ

ಬೆಂಗಳೂರಿನಲ್ಲಿರುವ ಪೇಯಿಂಗ್‌ ಗೆಸ್ಟ್‌ ಮಾಲೀಕರಿಗೆ ಬೆಂಗಳೂರು ಜಲಮಂಡಳಿ ದಿಢೀರ್ ನೀರಿನ ಬಿಲ್ ಯದ್ವಾತದ್ವ ಏರಿಸಿ ಶಾಕ್‌ ನೀಡಿದೆ. ಏಪ್ರಿಲ್ 2025 ರಿಂದ ಜಾರಿಗೆ ಬಂದಿರುವ ವಸತಿಯೇತರ ಬಳಕೆಯ ನೀರಿನ ದರ ಏರಿಕೆಯಿಂದಾಗಿ ಪಿಜಿಗಳಿಗೆ ಬರುತ್ತಿದ್ದ ೩-೪ ಸಾವಿರ ರೂ. ಇದ್ದ ನೀರಿನ ಬಿಲ್‌ ಒಮ್ಮೆಲೆ ೨೦-೨೫ ಸಾವಿರ ರೂ.ಗೆ ಏರಿಕೆಯಾಗಿದೆ. ಈ ಅವೈಜ್ಞಾನಿಕ ದರ ಏರಿಕೆಯಿಂದ ಕಂಗಾಲಾಗಿರುವ ಪಿಜಿ ಮಾಲೀಕರು ಶುಲ್ಕ ಕಡಿಮೆಗೊಳಿಸುವಂತೆ ಜಲ ಮಂಡಳಿ ಯನ್ನು ಒತ್ತಾಯಿಸಿದ್ದಾರೆ.

ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಜಲಮಂಡಳಿಗೆ ಮನವಿ ಸಲ್ಲಿಸಿ, ಈ ದರ ಏರಿಕೆಯನ್ನು ವಾಪಸ್ ಪಡೆಯುವಂತೆ ಕೋರಿದೆ. ಪಿಜಿಗಳನ್ನು ದೊಡ್ಡ ವಾಣಿಜ್ಯ ಚಟುವಟಿಕೆಯ ರೀತಿ ಪರಿಗಣಿಸಿ, ಒಳಚರಂಡಿ ಶುಲ್ಕ ಮತ್ತು ಇತರ ಶುಲ್ಕಗಳನ್ನು ದುಬಾರಿಗೊಳಿಸಲಾಗಿದೆ. ಪಿಜಿಗಳಿಗೆ ವಿಧಿಸಲಾಗಿರುವ ಒಳಚರಂಡಿ ಶುಲ್ಕವು 50%-60% ರಷ್ಟು ಏರಿಕೆಯಾಗಿದೆ ಎಂದು ಸಂಘ ದೂರಿದೆ.

ಉದ್ಯೋಗ, ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುವ ಲಕ್ಷಾಂತರ ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಪಿಜಿಗಳು ಒದಗಿಸುತ್ತಿವೆ. , ಜಲಮಂಡಳಿಯ ದರ ಏರಿಕೆ ಇವುಗಳನ್ನು ಆರ್ಥಿಕವಾಗಿ ಒತ್ತಡಕ್ಕೆ ಸಿಲುಕಿಸಿದೆ. ನಗರದ ಸಣ್ಣ ಪಿಜಿಗಳು ಈಗಾಗಲೇ ಏರುತ್ತಿರುವ ವೆಚ್ಚಗಳಿಂದ ಕಂಗಾಲಾಗಿವೆ. ವಿದ್ಯುತ್, ಆಹಾರ, ಮತ್ತು ಕಾರ್ಮಿಕ ವೆಚ್ಚಗಳ ಜೊತೆಗೆ ಈ ಹೊಸ ಶುಲ್ಕದಿಂದ ಕೆಲವು ಪಿಜಿ ಮಾಲೀಕರು ತಮ್ಮ ವ್ಯವಹಾರವನ್ನೇ ಮುಚ್ಚುವ ಆಲೋಚನೆಯಲ್ಲಿದ್ದಾರೆ ಎಂದು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *