Friday, September 19, 2025
Menu

ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 30 ರವರೆಗೆ ವಿದ್ಯುತ್‌ ವ್ಯತ್ಯಯ

ಬೆಸ್ಕಾಂ ವ್ಯಾಪ್ತಿಯಲ್ಲಿ 15 ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಘೋಷಿಸಿದೆ. ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ. ತುರ್ತು ನಿರ್ವಹಣೆ ಸಂಬಂಧ ವಿದ್ಯುತ್​​ ಕಡಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ.

ಸರ್ಜಾಪುರ-ಅತ್ತಿಬೆಲೆ 66 ಕೆವಿ ಲೈನ್​​ನ ಸಿಂಗಲ್-ಸರ್ಕ್ಯೂಟ್​​ ಹೆಚ್​​​ಟಿಎಲ್​​ಎಸ್​ ಕಂಡಕ್-ಟರ್‌ನ ತಂತಿಯನ್ನು ದುರಸ್ತಿಗೊಳಿಸಲು ಸೆಪ್ಟೆಂಬರ್ 19, 20 ಮತ್ತು 21 ರಂದು ವಿದ್ಯುತ್​ ಕಡಿತ ಗೊಳಿಸಲಾಗುತ್ತಿದೆ. ಯಡವನ-ಹಳ್ಳಿ, ಇಚ್ಚಂಗೂರು, ವಡ್ಡರ-ಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಪಟ್ಟಣ, ಮಾಯಸಂದ್ರ,ದಾಸನಪುರ, ಬಲ್ಲೂರು, ಕಂಬಳಿಪುರ, ಚಿಕ್ಕನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ ಆನೇಕಲ್ ಟೌನ್, ಕಾವಲುಹೊಸಹಳ್ಳಿ, ಗೌರೇನಹಳ್ಳಿ, ಹಲ್ದೇನಹಳ್ಳಿ, ಹೊಂಪಲಗಟ್ಟಾ, ಚೌಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆಗಳಲ್ಲಿ ವಿದ್ಯುತ್‌ ವ್ಯತ್ಯಯವಿರುತ್ತದೆ.

66/11 ಕೆವಿ ಲೈನ್‌ನ ಸಮಂದೂರು ವ್ಯಾಪ್ತಿಯ ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗರಹಳ್ಳಿ, ವನಕನಹಳ್ಳಿ. ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಅಟಲ್‌ಭೂಜಲ್ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾಮಗಾರಿ ಹಿನ್ನಲೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಪೂರೈಕೆ ಕಡಿತವಿರುತ್ತದೆ.

ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ಅಟಲ್​ ಭೂಜಲ್​​ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್​​​ ನಿರ್ಮಾಣ ಕಾಮಗಾರಿ ಹಿನ್ನಲೆ ಸೆ. 20, 22, 24, 26, 28 ಮತ್ತು 30 ರಂದು ಹನುಮಂತಪುರ, ಜಗನ್ನಾಥಪುರ, ಅಣ್ಣೆತೋಟ, ಅಗ್ನಿಬನಿರಾಯ ನಗರ, ನಿರ್ವಾಣಿ ಲೇಔಟ್, ಅಂಬೇಡ್ಕರ್‌ ನಗರ. ಬಿ.ಎ. ಗುಡಿಪಾಳ್ಯ.ಸೆ. 19, 21, 23, 25, 27 ಮತ್ತು 29ರಂದು ಬಿ.ಹೆಚ್‌.ಪಾಳ್ಯ, ದಿಬ್ಬೂರು, ಗುಬ್ಬಿ ಗೇಟ್, ಹೊಸಹಳ್ಳಿ, ಹಾರೋನಹಳ್ಳಿ, ರಿಂಗ್ ರಸ್ತೆ, ಹೆಬ್ಬಾಕ, ಹೊನ್ನೇನಹಳ್ಳಿ, ಡಿ.ಎಂ.ಪಾಳ್ಯ, ಕಪ್ಪೂರು, ನರಸಾಪುರ, ಪಿಎನ್​ಆರ್​​ ಪಾಳ್ಯ, ಭಜಂತ್ರಿ ಪಾಳ್ಯ, ಕೆಜಿ ಪಾಳ್ಯ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

Related Posts

Leave a Reply

Your email address will not be published. Required fields are marked *