ಟೊಕಿಯೊ: ಒಲಿಂಪಿಕ್ಸ್ ಡಬಲ್ ಪದಕ ವಿಜೇತ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿ ಪದಕದಿಂದ ವಂಚಿತರಾದರೆ, ನೀರಜ್ ಚೋಪ್ರಾ ಹಿಂದಿಕ್ಕಿದ ಭಾರತದ ಮತ್ತೊಬ್ಬ ಸ್ಪರ್ಧಿ ಸಚಿನ್ ಯಾದವ್ 4ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಗುರುವಾರ ನಡೆದ ಫೈನಲ್ ನಲ್ಲಿ ನೀರಜ್ ಚೋಪ್ರಾ 8ನೇ ಸ್ಥಾನಕ್ಕೆ ಕುಸಿದರು. ಈ ಮೂಲಕ 2021ರ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಇಲ್ಲದೇ ಮೊದಲ ಬಾರಿ ಬರಿಗೈಯಲ್ಲಿ ಮರಳಿದ್ದಾರೆ.
ನೀರಜ್ ಚೋಪ್ರಾ 84.03 ಮೀ. ದೂರ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರು. ಇದರಿಂದ ಪ್ರಶಸ್ತಿಯ ಸಮೀಪವೂ ಬರಲಿಲ್ಲ. ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ 10ನೇ ಸ್ಥಾನಕ್ಕೆ ಕುಸಿದು ಕಳಪೆ ಸಾಧನೆ ಮಾಡಿದರು.
ಭಾರತದ ಮತ್ತೊಬ್ಬ ಸ್ಪರ್ಧಿ ಸಚಿನ್ ಯಾದವ್ ಜೀವನಶ್ರೇಷ್ಠ 86.27 ಮೀ. ದೂರ ದಾಖಲಿಸಿ 4ನೇ ಸ್ಥಾನ ಪಡೆಯುವ ಮೂಲಕ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾದರು.
ಟ್ರಿನಿಡಾಡ್ ಅಂಡ್ ಟೊಬೆಗೊ ಸ್ಪರ್ಧಿ ಕೆಶ್ರೋನ್ ವಾಲ್ಕಾಟ್ 88.16 ಮೀ. ಗರಿಷ್ಠ ದೂರ ದಾಖಲಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಗ್ರೆನೆಡಾದ ಆಂಡರ್ಸನ್ 87.33 ಮೀ.ನೊಂದಿಗೆ ಬೆಳ್ಳಿ ಹಾಗೂ ಅಮೆರಿಕದ ಕರ್ಟಿಸ್ ಥಾಂಪ್ಸನ್ 86.67 ಮೀ. ಜಾವೆಲಿನ್ ಎಸೆದು ಬೆಳ್ಳಿ ಪದಕಕ್ಕೆ ತೃಪ್ತರಾದರು.