ಮೂರು ವರ್ಷಕ್ಕಿಂತ ಹಿಂದಿನ ಜಿಎಸ್ಟಿ ಸಲ್ಲಿಸದೆ ಬಾಕಿ ಉಳಿಸಿಕೊಂಡಿರುವವರಿಗೆ ಪಾವತಿಗೆ ಈ ತಿಂಗಳ ಕೊನೆ ಯವರೆಗೆ ಅಂದರೆ ಜೂನ್ 30ರವರೆಗೆ ಅವಕಾಶ ಕೊಡಲಾಗಿದೆ. ಜುಲೈ 1ರಿಂದ ಆ ಮೂರು ವರ್ಷದ ಹಿಂದಿನ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ.
ಜೂನ್ 30ರೊಳಗೆ ಮೂರು ವರ್ಷದ ಹಿಂದಿನ ಜಿಎಸ್ಟಿ ಸಲ್ಲಿಸದೇ ಇದ್ದರೆ ಆ ತೆರಿಗೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸಿಗುವುದಿಲ್ಲ. ಈ ವಿಚಾರದಲ್ಲಿ ತೆರಿಗೆ ಅಧಿಕಾರಿಗಳು ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಲು ಅವಕಾಶ ವಿದೆ.
ಜುಲೈ 1ರಿಂದ ಮೂರು ವರ್ಷದ ಹಿಂದಿನವರೆಗಿನ ಜಿಎಸ್ಟಿ ಸಲ್ಲಿಸಲು ಅವಕಾಶ ಇರುತ್ತದೆ. ಅದಕ್ಕೂ ಹಿಂದಿನ ತೆರಿಗೆಗೆ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ.
ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ: ನೀವು ಒಂದು ಉತ್ಪನ್ನ ತಯಾರಿಸಬೇಕಾದರೆ ಕಚ್ಚಾ ವಸ್ತು ಖರೀದಿಸುವಾಗ ತೆರಿಗೆ ಪಾವತಿಸಿರುತ್ತೀರಿ. ನಿಮ್ಮ ಉತ್ಪನ್ನ ಮಾರುವಾಗಲೂ ತೆರಿಗೆ ಪಾವತಿಸುತ್ತೀರಿ. ಒಂದೇ ಉತ್ಪನ್ನಕ್ಕೆ ನೀವು ಎರಡೆರಡು ಬಾರಿ ಟ್ಯಾಕ್ಸ್ ಕಟ್ಟಿದಂತಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರವು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಒದಗಿಸಿದೆ. ಕಚ್ಚಾ ವಸ್ತುಗಳ ಖರೀದಿ ವೇಳೆ ಪಾವತಿಸಿದ ತೆರಿಗೆ ಮೊತ್ತವನ್ನು ಮರಳಿ ಪಡೆಯಬಹುದು. ಇದೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್. ಇದನ್ನು ಪಡೆಯಬೇಕಾದರೆ ಎಲ್ಲಾ ಇನ್ವಾಯ್ಸ್ ದಾಖಲೆಗಳನ್ನು ಸಿದ್ಧಪಡಿಕೊಂಡು ಜಿಎಸ್ಟಿ ರಿಟರ್ನ್ ಫೈಲ್ ಮಾಡಬೇಕು.