Menu

Aamir Khan: ವಡಾ ಪಾವ್ ಮಾರುತ್ತ ಸಿನಿಮಾ ಪ್ರಚಾರ ಮಾಡಿದ ಆಮಿರ್ ಖಾನ್

ಮುಂಬೈ ಬೀದಿಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ವಡಾ ಪಾವ್ ಮಾರಾಟ ಮಾಡುವ ಮೂಲಕ ನಟ ಅಮಿರ್ ಖಾನ್‌ ಚಿತ್ರದ ಪ್ರಚಾರ ಮಾಡುತ್ತಿರುವ ವೀಡಿಯೊ ವೈರಲ್‌ ಆಗಿದೆ.

ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರನ್ನೂ ಒಳಗೊಂಡ ಈ ವೀಡಿಯೊವನ್ನು ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ಬಂಟು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವೇದಾಂತ್ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಿತಾರೆ ಜಮೀನ್ ಪರ್ ಸಿನಿಮಾ ಪ್ರಚಾರಕ್ಕಾಗಿ ಅಮಿರ್ ಈ ಕೆಲಸ ಮಾಡಿದ್ದಾರೆ, ಜೂನ್ 20ರಂದುಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಸಕ್ಸಸ್ ಗಾಗಿ ನಟ ನಟಿಯರು ಏನೆಲ್ಲ ಮಾಡ್ತಾರೆ ದೇವರೇ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೆನೆಲಿಯಾ ದೇಶ್ಮುಖ್ ಕೂಡ ನಟಿಸಿರುವ ಈ ಕ್ರೀಡಾ ಹಾಸ್ಯ ನಾಟಕವು ಅವರ ಮತ್ತು ದರ್ಶೀಲ್ ಸಫಾರಿ ಅವರ 2007 ರ ಮಾಸ್ಟರ್ ಪೀಸ್ ತಾರೆ ಜಮೀನ್ ಪರ್ ಚಿತ್ರದ ಮುಂದುವರಿದ ಭಾಗವಾಗಿದೆ.

 

 

Related Posts

Leave a Reply

Your email address will not be published. Required fields are marked *