ಉತ್ತರಾಖಂಡದ ಹಲವೆಡೆ ಮೇಘಸ್ಫೋಟದ ಪರಿಣಾಮ ಏಕಾಏಕಿ ಪ್ರವಾಹ ಉಂಟಾಗಿದ್ದು, ಭೂಕುಸಿತಗಳು ಸಂಭವಿಸಿವೆ. ಭಾರಿ ಮಳೆ ಮತ್ತು ಪ್ರವಾಹಕ್ಕೆ ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದ, ಮನೆಗಳು ಕುಸಿದಿವೆ. ಅನೇಕರು ನಾಪತ್ತೆಯಾಗಿದ್ದಾರೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಿಮಾಲಯದ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಕಡೆ ಮೇಘಸ್ಫೋಟಗೊಂಡು ಪರಿಸ್ಥಿತಿ ಹದಗೆಟ್ಟಿದೆ. ಮೇಲ್ವಿಚಾರಣೆ ನಡೆಸಲಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿರುವುದಾಗಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.\
25 ರಿಂದ 30 ಸ್ಥಳಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದರೆ, ಮನೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಂಡಿವೆ. ಸರ್ಕಾರಿ ಆಸ್ತಿಪಾಸ್ತಿಗಳು ಕೂಡ ನಾಶವಾಗಿವೆ. ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿಗಳ ನೀರಿನ ಮಟ್ಟ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಧಾಮಿ ತಿಳಿಸಿದ್ದಾರೆ.
ಉತ್ತರಾಖಂಡಕ್ಕೆ ಸಾಧ್ಯವಾಗುವ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಮಾತನಾಡಿ, ಡೆಹ್ರಾಡೂನ್‌ನಲ್ಲಿರುವ ಸಹಸ್ರಧಾರ ಮತ್ತು ಮಾಲ್ ದೇವತಾ, ಮಸ್ಸೂರಿಯಲ್ಲಿ ಹಾನಿಯಾಗಿರುವ ವರದಿಯಾಗಿದೆ. ಡೆಹ್ರಾಡೂನ್ನಲ್ಲಿ ಮೂವರುನಾಪತ್ತೆಯಾಗಿದ್ದು, ಮಸ್ಸೂರಿಯಲ್ಲಿ ಒಬನ್ಬರು ಮೃತಪಟ್ಟಿರುವ ಶಂಕೆಯಿದೆ. ಎಂದು ಮಾಹಿತಿ ನೀಡಿದ್ದಾರೆ.
ಮಜರಾ ಗ್ರಾಮದ ಭೂಕುಸಿತದಿಂದ ಕೆಲವು ಜನರು ಕಾಣೆಯಾಗಿದ್ದಾರೆ. ಸಹಸ್ರಧಾರದ ಹಲವಾರು ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದು, ಪ್ರವಾಹದಿಂದಾಗಿ ಮನೆಗಳು ಮತ್ತು ಆಸ್ತಿಗಳಿಗೆ ಹಾನಿಯಾಗಿದೆ.
ಇಲ್ಲಿಯವರೆಗೆ 300 ರಿಂದ 400 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಸುಮನ್ ತಿಳಿಸಿದ್ದಾರೆ.
ತೆಹ್ರಿಯಲ್ಲಿ ನೀರು ನಿಂತಿದ್ದರಿಂದ ಗೀತಾ ಭವನದಲ್ಲಿ ಜನರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲಾಗಿದೆ. ನೈನಿತಾಲ್‌ನಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತಕ್ಕೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಹೇಳಿದ್ದಾರೆ.