ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮನೆ ಹಾಗೂ ವಾಹನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿ ಕಳವಾಗಿರುವ ಚಿನ್ನ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಐದು ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿಗಳಿಂದ 17 ಲಕ್ಷ ಮೌಲ್ಯದ 86 ಗ್ರಾಂ ಚಿನ್ನ, 10 ಲಕ್ಸುರಿ ಬೈಕ್‌ಗಳು ಹಾಗೂ 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಪೊಲೀಸ್ ಠಾಣೆಯ ಬೈಕ್ ಕಳವಾಗಿತ್ತು, ಜನವರಿಯಲ್ಲಿ ಮುಕ್ಕಾಲು ಕೆಜಿ ಚಿನ್ನ ವ್ಯಕ್ತಿಯೊಬ್ಬರ ಮನೆಯಿಂದ ದರೋಡೆಯಾಗಿತ್ತು. ಯಳಂದೂರು, ನರ್ಸಿಂಗ್ ಬೋರ್ಡ್ ಸೇರಿದಂತೆ ಹಲವೆಡೆ ಕಳ್ಳರ ಹಾವಳಿ ಮಿತಿ ಮೀರಿತ್ತು. ದೇವಾಲಯದ ಹುಂಡಿ ಕೂಡ ಕಳವಾಗಿತ್ತು.
ಪ್ರಕರಣಗಳ ಜಾಡು ಹಿಡಿದು 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೆ.ಟಿ.ಎಂ, ಎನ್.ಎಸ್ ಹಾಗೂ ಇನ್ನಿತರ ಐಶಾರಾಮಿ ಬೈಕ್‌ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಹೋದ ಪಂಚಾಯತಿ ಸದಸ್ಯೆಯ ಮನೆ
ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಮದಲ್ಲಿ ಪಂಚಾಯತಿ ಸದಸ್ಯೆ ಲಲಿತಾ ಅವರ ಮನೆಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟುಹೋಗಿದೆ. ಕುಟುಂಬ ಸದಸ್ಯರು ಊಟ ಮಾಡಿ ಮಲಗಿದ್ದ ಸಮಯದಲ್ಲಿ ದುರಂತ ಸಂಭವಿಸಿ ಎಂಟು ಲಕ್ಷ ರೂಪಾಯಿಗಳ ಆಸ್ತಿ ನಷ್ಟವಾಗಿದೆ.ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.