Wednesday, August 06, 2025
Menu

ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ: ಪ್ರಧಾನಿ ಮೋದಿ ಲೋಕಾಪರ್ಣೆ

world highest bridge arch

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿರುವ ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

ಪೆಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರನ್ನು ಉಗ್ರರು ಹತ್ಯೆಗೈದ ಘಟನೆ ನಂತರ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರಕ್ಕೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ಮೋದಿ ಚೆನಾಬ್ ರೈಲ್ವೆ ಸೇತುವೆ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

272 ಕಿ.ಮೀ. ಉದ್ದದ ಶ್ರೀನಗರದ ಉದಂಪುರ್ ನಿಂದ ಬಾರಮುಲ್ಲಾ ರೈಲ್ವೆ ಲಿಂಕ್ ಮಾರ್ಗದಲ್ಲಿ ವಂದೇ ಭಾರತ್ ಸಂಚರಿಸಲಿದೆ. ಇದೇ ವೇಳೆ ಕೇಬಲ್ ಆಧಾರಿತ ಮೊದಲ ರೈಲ್ವೆ ಸೇತುವೆ ಅಂಜಿ ಖಾದ್ ರೈಲ್ವೆ ಸೇತುವೆಯನ್ನು ಇದೇ ಸಂದರ್ಭದಲ್ಲಿ ಮೋದಿ ಉದ್ಘಾಟಿಸಿದರು.

ಜಮ್ಮು ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ಹವಾಮಾನ ವೈಪರಿತ್ಯಗಳ ನಡುವೆ ಸಂಚರಿಸುವ ರೈಲುಗಳಿಗೆ ಈ ಮಾರ್ಗ ಮಹತ್ವದ್ದಾಗಿದೆ. ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ರೈಲು ಸೇತುವೆ ಕೊನೆಗೂ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಂಡಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಾರಾಮುಲ್ಲಾ – ಕಾಟ್ರಾ ನಡುವೆ ಸಂಚರಿಸುವ ಎರಡು ವಂದೇ ಭಾರತ್ ರೈಲು ಮಾರ್ಗಗಳಿಗೆ ಚಾಲನೆ ನೀಡಿದರು. ಈ ರೈಲುಗಳು ಜೂನ್ 7ರಿಂದ  ವಾರದಲ್ಲಿ 6 ದಿನ ಸಂಚರಿಸಲಿವೆ.

Related Posts

Leave a Reply

Your email address will not be published. Required fields are marked *