ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಮೂರನೇ ಮಹಡಿಯಿಂದ ಏಳು ವರ್ಷದ ಮಗುವನ್ನು ತಳ್ಳಿ ಮಲತಾಯಿ ಕೊಂದಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾನವಿ ಮೃತ ಬಾಲಕಿ.
ಆಗಸ್ಟ್ 27ರಂದು ಘಟನೆ ನಡೆದಿದ್ದು, ಶಾನವಿ ಮಹಡಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವುದಾಗಿ ಎಂದು ಕುಟುಂಬಸ್ಥರು ನಂಬಿದ್ದರು. ಆದರೆ ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಮಾಡಿರುವ ಕೃತ್ಯ ಬಹಿರಂಗಗೊಂಡಿದೆ.
ಪ್ರಕರಣ ಸಂಬಂಧ ಮಲತಾಯಿ ರಾಧಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೃತ ಶಾನವಿ ತಾಯಿ 6 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಶಾನವಿ ತಂದೆ ಸಿದ್ಧಾಂತ 2023ರಲ್ಲಿ ರಾಧಾ ಜೊತೆ 2ನೇಮದುವೆಯಾಗಿದ್ದರು. ಸಿದ್ಧಾಂತ ಹಾಗೂ ರಾಧಾಗೆ ಅವಳಿ ಮಕ್ಕಳು ಹುಟ್ಟಿದ ಬಳಿಕ ಸಿದ್ಧಾಂತರ ಮೊದಲನೇ ಮಗಳ ತಮ್ಮಗೆ ಹೊರೆ ಎಂದು ರಾಧಾ ಕೊಂದು ಬಿಟ್ಟಿದ್ದಾಳೆ.
ರಾಧಾ ಬಾಲಕಿ ಜೊತೆ ಟೇರಸ್ ಮೇಲೆ ಸಂಶಯಾಸ್ಪದ ರೀತಿ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಸಿದ್ಧಾಂತ ಅವರ ವಾಟ್ಸಾಪ್‌ಗೆ ಪಕ್ಕದ ಮನೆ ಮಾಲೀಕ ಕಳುಹಿಸಿದ್ದಾರೆ. ಮೇಲ್ಮಹಡಿಯಲ್ಲಿ ಕುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಶಾನವಿಯ ಅಜ್ಜಿ ರಾಧಾ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ.
ಕುಡಿದು ಟ್ರಕ್ ಚಾಲನೆ: ಅಪಘಾತಕ್ಕೆ ಇಬ್ಬರು ಬಲಿ
ಮಧ್ಯಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಟ್ರಕ್ ಚಲಾಯಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ವಿದ್ಯಾ ಪ್ಯಾಲೇಸ್‌ನಿಂದ ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ 1.5 ಕಿ.ಮೀ ದೂರದವರೆಗೆ ಎದುರಿದ್ದ ಎಲ್ಲಾ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಟ್ರಕ್ ಮೊದಲು ಬೈಕ್‌ಗೆ ಡಿಕ್ಕಿಯಾಗಿ ಮುಂದಕ್ಕೆ ಚಲಿಸಿ ಕಾರುಗಳು, ಆಟೋರಿಕ್ಷಾಗಳು ಮತ್ತು ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದೆ.
ಜನರು ಸ್ಥಳದಿಂದ ಕಿರುಚುತ್ತಾ ಓಡುತ್ತಿದ್ದರು, ಆದರೆ ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಜ್ಜುಗುಜ್ಜಾದ ಬೈಕ್‌ಗೆ ಬೆಂಕಿ ಹೊತ್ತಿಕೊಂಡು ಟ್ರಕ್ ಮುಂಭಾಗಕ್ಕೂ ವ್ಯಾಪಿಸಿತ್ತು.