ಸೆ. 15, 16, 17ರಂದು ಬೆಂಗಳೂರಿನಲ್ಲಿ ಮನೆಗಳಿಗೆ ಕಾವೇರಿ ನೀರು ಪೂರೈಕೆ ಇರುವುದಿಲ್ಲ. ತುರ್ತು ಕಾಮಗಾರಿ ಹಿನ್ನೆಲೆ ಜಲರೇಚಕ ಯಂತ್ರಗಳನ್ನು ಮೂರು ದಿನ ಸ್ಥಗಿತಗೊಳಿಸುತ್ತಿರುವ ಕಾರಣ ನೀರು ಪೂರೈಕೆ ವ್ಯತ್ಯಯಗೊಂಡು ನಾಳೆಯಿಂದ 60 ಗಂಟೆ ಮನೆಗಳಿಗೆ ಕಾವೇರಿ ನೀರು ಬರುವುದಿಲ್ಲ.
ಮುಂಜಾಗ್ರತೆಯಾಗಿ ಅಗತ್ಯ ನೀರು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆ ಖಚಿತಪಡಿಸಿಕೊಳ್ಳಲು ಹಾಗೂ
ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿ ಕೈಗೊಂಡಿದೆ. ಸೆ.15ರ ಮಧ್ಯರಾತ್ರಿ 1ರಿಂದ ಸೆ.17ರ ಮಧ್ಯಾಹ್ನ 1ರವರೆಗೆ ನೀರು ಸರಬರಾಜು ಸ್ಥಗಿತವಾಗಲಿದೆ.
ಹಿರಿಯ ನಟಿ ಲೀಲಾವತಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಲು ಆಗ್ರಹ
ವಿಷ್ಣುವರ್ಧನ್, ಸರೋಜಾ ದೇವಿಗೆ ಕರ್ನಾಟಕ ರತ್ನ ಘೋಷಣೆ ಬೆನ್ನಲ್ಲೇ ಹಿರಿಯ ನಟಿ ಲೀಲಾವತಿಗೂ ನೀಡುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಲೀಲಾವತಿ ಅವರ ಸಾಧನೆ ಗಮನಿಸಿ ಅವರಿಗೂ ಪ್ರಶಸ್ತಿ ನೀಡಿ ಎಂದು ಃಏಳುವ ವೀಡಿಯೊ ವೈರಲ್ ಆಗಿದೆ. ಕರವೇ ಹೋರಾಟಗಾರ ಪ್ರಕಾಶ್ ಹಾಗೂ ನಾಗರಾಜ್ ಸೇರಿದಂತೆ ಹಲವರು ಈ ಆಗ್ರಹ ಮುಂದಿಟ್ಟಿದ್ದಾರೆ.
ಸಿಎಂ, ಡಿಕೆಶಿ ಅವರೇ ಲೀಲಾವತಿ ಅವರು ಕೂಡ ಕರ್ನಾಟಕ ಪ್ರಶಸ್ತಿಗೆ ಅರ್ಹರಿದ್ದಾರೆ. 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ಡಾಕ್ಟರ್ ಎಂ ಲೀಲಾವತಿ ಅಮ್ಮನವರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಒಂದು ವೇಳೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದುಹೇಳಿದ್ದಾರೆ.