ಮದ್ದೂರಿನ ಹೆಮ್ಮನಹಳ್ಳಿಯ ಮನೆಯಲ್ಲಿ ಹರ್ಷಿತಾ ಎಂಬ ಮಹಿಳೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪತಿಯ ಮನೆ ಮುಂದೆ ಶವ ಇಟ್ಟು ಪೋಷಕರು ಧರಣಿ ನಡೆಸುತ್ತಿದ್ದಾರೆ.
ಹರ್ಷಿತಾ ಶವವಾಗಿ ಪತ್ತೆಯಾದ ಬಳಿಕ ಆಕೆಯ ಪತಿ ಮತ್ತು ಕುಟುಂಬದವರು ನಾಪತ್ತೆಯಾಗಿದ್ದಾರೆ. ಪತಿ ನಂದೀಶ್ ಹಾಗೂ ಅವರ ಕುಟುಂಬ ಮನೆಗೆ ಬರುವಂತೆ ಆಗ್ರಹಿಸಿ ಶವ ಇಟ್ಟು ನ ಮನೆ ಮುಂದೆ ಶವವಿಟ್ಟು ಪೋಷಕರು ಪ್ರತಿಭಟಿಸುತ್ತಿದ್ದಾರೆ.
ನಂದೀಶ್ ಮತ್ತು ಕುಟುಂಬ ಮನೆಗೆ ಬರದಿದ್ದರೆ ಈ ಮನೆಯಲ್ಲಿಯೇ ಹರ್ಷಿತಾ ಶವ ಸಂಸ್ಕಾರ ಮಾಡುವುದಾಗಿ ಪೋಷಕರು ಪಟ್ಟು ಹಿಡಿದಿದ್ದಾರೆ. ಗಂಡ ಹಾಗೂ ಆತನ ಮನೆಯವರು ಮಗಳನ್ನು ಕೊಂದು ನೇಣು ಹಾಕಿರುವುದಾಗಿ ಆರೋಪಿಸಿ ಪೋಷಕರು ದೂರು ನೀಡಿದ್ದಾರೆ.
ಕುಡಿದ ನಶೆಯಲ್ಲಿ ಬೈಕ್ ರೈಡಿಂಗ್: ರಸ್ತೆಗೆ ಬಿದ್ದ ಯುವಕರು
ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರೋಡ್‌ನಲ್ಲಿ ಕುಡಿದ ನಶೆಯಲ್ಲಿದ್ದು ಬೈಕ್ ರೈಡ್ ಮಾಡಲಾಗದೆ ಯುವಕರು ನಡು ರಸ್ತೆಯಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ.
ಯುವಕರ ಅವಾಂತರ ಕಾರಿನ ಡ್ಯಾಶ್ ಬೋರ್ಡ್ ಕೆಮೆರಾದಲ್ಲಿ ರೆಕಾರ್ಡ್ ಆಗಿದೆ. ಯುವಕರು ಬೆಳಗಿನ ಜಾವ ಕುಡಿದು ತ್ರಿಬಲ್ ರೈಡಿಂಗ್ ಮಾಡುತ್ತ ಬ್ಯಾಲೆನ್ಸ್ ತಪ್ಪಿ ಹಿಂಬದಿಯಿದ್ದ ಕಾರಿನ ಮೇಲೆ ಬೈಕ್ ಬೀಳಿಸಿದ್ದಾರೆ.
ಕಾರಿನಿಂದ ಇಳಿದು ಯುವಕರ ಪ್ರಶ್ನಿಸಿದ ಕಾರು ಚಾಲಕನ ಜೊತೆ ಹುಚ್ಚಾಟ ನಡೆಸಿದ್ದು, ಪೊಲೀಸರಿಗೆ ಕಾರು ಚಾಲಕ ಮಾಹಿತಿ ನೀಡುತ್ತಿರುವುದನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಇಬ್ಬರು ಆಟೋದಲ್ಲಿ ಹೋದರೆ ಒಬ್ಬ ಬೈಕ್ ರೈಡ್ ಮಾಡಿಕೊಂಡು ಹೋಗಿದ್ದಾನೆ.