Menu

Covid: ದೇಶದಲ್ಲಿ ಕೋವಿಡ್‌ ಸೋಂಕು ಹೆಚ್ಚಳ, ಮತ್ತೆ ಏಳು ಸಾವು

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ನಿನ್ನೆಯಿಂದ ಇವತ್ತಿಗೆ 276 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ 4,302 ಕ್ಕೆ ತಲುಪಿದೆ. ಇದರಿಂದಾಗಿ ಏಳು ಸಾವುಗಳಾಗಿವೆ. ಆರೋಗ್ಯ ಸಚಿವಾಲಯ ಇತ್ತೀಚಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾ ಲಯದ ಪ್ರಕಾರ, ನಿನ್ನೆಯಿಂದ ಪಶ್ಚಿಮ ಬಂಗಾಳದಲ್ಲಿ 60 ಹೊಸ ಪ್ರಕರಣಗಳು ವರದಿಯಾಗಿವೆ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಕ್ರಮವಾಗಿ 63 ಮತ್ತು 64 ಪ್ರಕರಣಗಳು ಕಂಡುಬಂದಿವೆ. ದೆಹಲಿಯಲ್ಲಿ 47 ಹೊಸ ಪ್ರಕರಣಗಳು ದಾಖಲಾಗಿವೆ, ಕೇರಳದಲ್ಲಿ 35 ಹೊಸ ಪ್ರಕರಣಗಳು ವರದಿಯಾಗಿವೆ.

ದೆಹಲಿಯಲ್ಲಿ 457, ಗುಜರಾತ್‌ನಲ್ಲಿ 461, ಕರ್ನಾಟಕದಲ್ಲಿ 324, ಕೇರಳದಲ್ಲಿ 1373, ಮಹಾರಾಷ್ಟ್ರದಲ್ಲಿ 510, ತಮಿಳುನಾಡಿನಲ್ಲಿ 216, ಉತ್ತರ ಪ್ರದೇಶದಲ್ಲಿ 201 ಮತ್ತು ಪಶ್ಚಿಮ ಬಂಗಾಳದಲ್ಲಿ 432 ಪ್ರಕರಣಗಳು ಸಕ್ರಿಯವಾಗಿವೆ.

ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿಯಲ್ಲಿರುವ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯು 25 ಹಾಸಿಗೆ ಗಳ COVID-19 ವಾರ್ಡ್ ಅನ್ನು ಸಜ್ಜುಗೊಳಿಸಿದೆ. ವೆಂಟಿಲೇಟರ್​ಗಳು ಇವೆ. ಆಸ್ಪತ್ರೆಗಳಲ್ಲಿ ಒಟ್ಟು 20 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಐದು ಗರ್ಭಿಣಿ ಯರು ಮತ್ತು ಪ್ರಸೂತಿ ಸೇವೆಗಳ ಅಗತ್ಯವಿರುವ ರೋಗಿಗಳಿಗೆ ಹಾಗೂ ಉಳಿದ ಹತ್ತು ಸಾಮಾನ್ಯ ಹಾಸಿಗೆಗಳು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ರಾಜ್ಯ ಸರ್ಕಾರವು ಅಗತ್ಯ ಕಿಟ್‌ಗಳನ್ನು ಕಳುಹಿಸುತ್ತಿದೆ.

Related Posts

Leave a Reply

Your email address will not be published. Required fields are marked *