ಮಾಸ್ಕೊ: ರಷ್ಯಾ ಪೂರ್ವದ ಕಮ್ಚಟ್ಕಾ ಕರಾವಳಿಯಲ್ಲಿ ಶನಿವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಂದು ತಿಂಗಳ ಅಂತರದಲ್ಲಿ ಸಂಭವಿಸಿದ ಎರಡನೇ ಪ್ರಬಲ ಭೂಕಂಪನ ಇದಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) . ರಷ್ಯಾದ ಕಮ್ಚಟ್ಕಾ ಪ್ರದೇಶದ ಆಡಳಿತ ಕೇಂದ್ರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿ ನಗರದಿಂದ ಪೂರ್ವಕ್ಕೆ 111 ಕಿಲೋಮೀಟರ್ (69 ಮೈಲು) ದೂರದಲ್ಲಿ 39.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿಸಿದ್ದು, ಪೆಸಿಫಿಕ್ ಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಿದೆ.
ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ಭೂಕಂಪನ ದಾಖಲಾಗಿದ್ದು, ರಷ್ಯಾದ ಕೆಲವು ಹತ್ತಿರದ ಕರಾವಳಿಗಳಲ್ಲಿ ಒಂದು ಮೀಟರ್ (3.3 ಅಡಿ) ಎತ್ತರದ ಅಪಾಯಕಾರಿ ಅಲೆಗಳು ಏಳಬಹುದು ಎಂದು PTWC ಆರಂಭದಲ್ಲಿ ಎಚ್ಚರಿಸಿದೆ.
ಕಳೆದ ಜುಲೈನಲ್ಲಿ, ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಇದು ಪೆಸಿಫಿಕ್ನಾದ್ಯಂತ ನಾಲ್ಕು ಮೀಟರ್ ಎತ್ತರದವರೆಗೆ ಸುನಾಮಿಯನ್ನು ಉಂಟುಮಾಡಿತು. ಅಲ್ಲದೇ ಅಮೆರಿಕ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸುನಾಮಿ ತಲುಪಿತ್ತು.
2011 ರಲ್ಲಿ ಜಪಾನ್ನಲ್ಲಿ 9.1 ತೀವ್ರತೆಯ ಭೂಕಂಪನವು 15,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. ಈ ಭೂಕಂಪದ ನಂತರ ದೊಡ್ಡ ಮಟ್ಟದಲ್ಲಿ 8.8 ತೀವ್ರತೆಯ ಭೂಕಂಪ ಕೂಡ ಸಂಭವಿಸಿತ್ತು. ಜುಲೈನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಜಪಾನ್ ಅಧಿಕಾರಿಗಳು ಸುಮಾರು ಎರಡು ಮಿಲಿಯನ್ ಜನರು ಎತ್ತರದ ಪ್ರದೇಶಗಳಿಗೆ ಹೋಗುವಂತೆ ಹೇಳಿದ್ದರು.