ಚಾಮರಾಜನಗರದಲ್ಲಿ ಚಿನ್ನದಂಗಡಿಗೆ ಗ್ರಾಹಕಿಯಂತೆ ಹೋಗಿ ಚಿನ್ನದ ಸರ ಎಗರಿಸುತ್ತಿದ್ದ ಮಹಿಳೆಯನ್ನು ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಲೀಲಾ ಬಂಧಿತ ಮಹಿಳೆ, ಆಭರಣ ಖರೀದಿಸುವ ನೆಪದಲ್ಲಿ ಚಾಮರಾಜನಗರದ ಜ್ಯುವೆಲರಿ ಶಾಪ್‌ಗೆ ಹೋಗಿದ್ದ ಆಕೆ ಸಿಬ್ಬಂದಿಯನ್ನು ಯಾಮಾರಿಸಿ 9 ಗ್ರಾಂ ಚಿನ್ನದ ಸರ ಹಾಗೂ ಪಿರಿಯಾ ಪಟ್ಟಣ ದಲ್ಲಿ 5 ಗ್ರಾಂನ ಒಡವೆಯನ್ನು ಕಳ್ಳತನ ಮಾಡಿದ್ದಳು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿ ಜ್ಯುಡಿಷಿಯಲ್ ಕಸ್ಟಡಿಗೆ ನೀಡಿದ್ದಾರೆ.
ಎಮ್ಮೆ ತೊಳೆಯುವಾಗ ಬಾವಿಗೆ ಬಿದ್ದು ದಂಪತಿ ಸಾವು
ಮಂಡ್ಯದ ಕೆ.ಆರ್‌ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ಎಮ್ಮೆ ತೊಳೆಯುವಾಗ ಬಾವಿಗೆ ಬಿದ್ದು ದಂಪತಿ ಮೃತಪಟ್ಟಿದ್ದಾರೆ. ವಸಂತಮ್ಮ(65) ಮತ್ತು ಕಾಳೇಗೌಡ (70) ದಂಪತಿ ಬಾವಿಗೆ ಬಿದ್ದು ಮೃತಪಟ್ಟವರು. ಎಮ್ಮೆ ತೊಳೆಯಲು ಹೋಗಿದ್ದಾಗ ತೆರೆದ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಕೂಡ ಮುಳುಗಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹನಿಟ್ರ್ಯಾಪ್: ಆರು ಮಂದಿಯ ಬಂಧನ
ಕುಂದಾಪುರದಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹಿಳೆ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ. ಮೂರು ಲಕ್ಷಕ್ಕೆ ಬೇಡಿಕೆ ಇಟ್ಟು ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ಆರೋಪದಡಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿ ಬಂಧಿಸಿದ್ದಾರೆ.