ಕೇರಳದ ಗಡಿಭಾಗ ಕಾಸರಗೋಡಿಲ್ಲಿ ಆ್ಯಸಿಡ್ ಕುಡಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಸರಗೋಡು ನಗರದ ಗೋಪಿ (58) ಪತ್ನಿ ಇಂದಿರಾ (55) ಮತ್ತು ಅಣ್ಣ ರಂಜೇಶ್ (37) ಹಾಗೂ ತಮ್ಮ ರಾಕೇಶ್ ಆತ್ಮಹತ್ಯೆ ಮಾಡಿಕೊಂಡವರು.
ಆ್ಯಸಿಡ್ ಕುಡಿದ ತಕ್ಷಣವೇ ಮೂವರು ಅಸು ನೀಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರಾಕೇಶ್ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಸ್ಥಳೀಯರು ಹೇಳುವಂತೆ ಹಣಕಾಸಿನ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವಾಗಿದ್ದು, ಈ ಘಟನೆ ನಡೆದ ದಿನ ಬೆಳಗ್ಗೆ ಗೋಪಿ ಪಕ್ಕದ ಮನೆಯವರಿಗೆ ತಾನು ಆ್ಯಸಿಡ್ ಸೇವಿಸಿರುವುದಾಗಿ ತಿಳಿಸಿದ್ದರಿಂದ ವಿಷಯ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.