Friday, September 05, 2025
Menu

ವೀಸಾ ಅವಧಿ ಮುಗಿದರೂ ಅಕ್ರಮ ವಾಸ: ವಿದೇಶಿಗರ ವಿರುದ್ಧ ಬೆಂಗಳೂರು ಪೊಲೀಸ್‌ ಕ್ರಮ

ವೀಸಾ ಅವಧಿ ಮುಗಿದರೂ ಇಲ್ಲೇ ವಾಸವಾಗಿರುವ ವಿದೇಶಿ ಪ್ರಜೆಗಳ ಪತ್ತೆಗೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಹಣದಾಸೆಗೆ ಸಮರ್ಪಕ ದಾಖಲೆಗಳನ್ನು ಪಡೆದುಕೊಳ್ಳದೆ
ಮನೆ ನೀಡಿದ ಮಾಲೀಕರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿಗೆ ಬರುವ ವಿದೇಶಿ ಪ್ರಜೆಗಳು ಪಾಸ್​​ ಪೋರ್ಟ್​, ವೀಸಾ ಅವಧಿ ಮುಗಿದಿದ್ದರು ಅಕ್ರಮವಾಗಿ ನಗರದಲ್ಲಿ ವಾಸವಿರುತ್ತಾರೆ. ಪೊಲೀಸ್ ಠಾಣೆಗೆ ಸಿ ಫಾರಂ ಸಲ್ಲಿಸದೆ ವಿದೇಶಿ ಪ್ರಜೆಗಳ ದಾಖಲೆಗಳನ್ನು ಪಡೆಯದೆ ಮನೆ ನೀಡಿರುವ ಮಾಲೀಕರ ವಿರುದ್ಧ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿವೆ.

ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ತಲಾ 1, ಕೊಡಿಗೆಹಳ್ಳಿ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ತಲಾ 2, ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ 3, ಕೊತ್ತನೂರು ಪೊಲೀಸ್ ಠಾಣೆಯಲ್ಲಿ 5, ಯಲಹಂಕ ಪೊಲೀಸ್ ಠಾಣೆಯಲ್ಲಿ 7 ಸೇರಿದಂತೆ ಪೂರ್ವ ವಿಭಾಗದಲ್ಲಿ ಒಟ್ಟು 23 ಪ್ರಕರಣ ದಾಖಲಾಗಿವೆ.

ವಿದೇಶಿ ಪ್ರಜೆಗಳಿಗೆ ಬಾಡಿಗೆ ಕೊಡುವ ಮನೆ ಮಾಲೀಕರಿಗೆ ವೈಟ್​ಫೀಲ್ಡ್ ವಿಭಾಗದ ಡಿಸಿಪಿಯಿಂದ ಇತ್ತೀಚೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಮನೆ ಮಾಲೀಕರು ಸಿ ಫಾರಂ ಎಫ್​​ಆರ್​ಆರ್​​ಒಗೆ ಸಲ್ಲಿಸಬೇಕು. ಬಾಡಿಗೆದಾರರ ಪಾಸ್​ಪೋರ್ಟ್, ವೀಸಾ ಪ್ರತಿ ಸಂಗ್ರಹಿಸಬೇಕು. ಬಾಡಿಗೆ ನೀಡುವ ಮೊದಲು ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು ಎಂದು ಮಾರ್ಗಸೂಚಿಸಯಲ್ಲಿ ತಿಳಿಸಲಾಗಿದೆ.

ವೀಸಾ ಇಲ್ಲದೆ ವಾಸಿಸಲು ಅವಕಾಶ ನೀಡಬಾರದು. ಬಾಡಿಗೆ ಒಪ್ಪಂದ ನೋಂದಾಯಿಸಿರಬೇಕು, ಈ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *