ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 6 ಯುದ್ಧ ವಿಮಾನ ಸೇರಿದಂತೆ 9 ವಿಮಾನಗಳು ಧ್ವಂಸಗೊಂಡಿವೆ ಎಂದು ಹೊಸ ವರದಿ ಹೇಳಿದೆ.
ಪೆಹಲ್ಗಾಮ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ 6 ಯುದ್ಧ ವಿಮಾನ, 2 ಬೇಹುಗಾರಿಕೆ ವಿಮಾನ ಹಾಗೂ ಒಂದು ಸರಕು ಸಾಗಾಣೆಯ ಸಿ-130 ಹರ್ಕ್ಯೂಲಸ್ ವಿಮಾನ ಧ್ವಂಸಗೊಂಡಿದೆ.
ಭಾರತ ನಡೆಸಿದ ಮಿನಿ ದಾಳಿ ನಂತರ ಪಾಕಿಸ್ತಾನಕ್ಕೆ ಆಗಿರುವ ಹಾನಿ ಕುರಿತು ಸಮೀಕ್ಷೆಗಳು ನಡೆಯುತ್ತಿದ್ದು, ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ಅಪಾರ ಹಾನಿಯುಂಟಾಗಿರುವುದು ಬೆಳಕಿಗೆ ಬಂದಿದೆ.
ಪಾಕಿಸ್ತಾನದ ವಾಯುಪಡೆಯ 6 ಯುದ್ಧ ವಿಮಾನಗಳು ಆಕಾಶದಿಂದ ಆಕಾಶದ ಮೇಲೆ ದಾಳಿ ನಡೆಸಬಲ್ಲ ಪಿಎಎಫ್ ಫೈಟರ್ ಜೆಟ್ ಗಳಾಗಿವೆ. ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿ ಈ ವಿಮಾನಗಳನ್ನು ದಾಳಿಗೆ ನಿಯೋಜಿಸಲಾಗಿತ್ತು.
ಭಾರತ 300 ಕಿ.ಮೀ. ದೂರದಲ್ಲಿರುವ ವಾಯುನೆಲೆಗಳ ಮೇಲೆ ದೂರಗಾಮಿ ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಿದ್ದು, ಭಾರತದ ಕ್ಷಿಪಣಿಗಳ ಆವಶೇಷ ಹಾಗೂ ಸ್ಥಳಗಳ ಮಾಹಿತಿಗಳನ್ನು ಆಧರಿಸಿ ಪಾಕಿಸ್ತಾನದ ವಾಯುಪಡೆಗೆ ಆಗಿರುವ ಹಾನಿಯನ್ನು ಕಂಡು ಹಿಡಿಯಲಾಗಿದೆ.